ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಕ್ರಮಿಗಳನ್ನು ಕಂಡರೆ ಅಕ್ಕರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
‘ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೋಡಿಹಳ್ಳಿ ಎಂಬ ರೈತ ಮುಖಂಡ ರೈತ ಚಳವಳಿ ನಿಲ್ಲಿಸಲು ರಾಕೇಶ್ ಟಿಕಾಯತ್ ಸೂಚನೆಯಂತೆ 35 ಕೋಟಿ ಮೊತ್ತದ ಡೀಲ್ ಮಾಡಿಕೊಂಡಿದ್ದು ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಇಂತಹ ಕೋಡಿಹಳ್ಳಿ, ಟಿಕಾಯತ್ ನಡೆಗಳನ್ನು ಡಿಕೆಶಿ ಸಮರ್ಥಿಸುತ್ತಾರೆ. ಡಿಕೆಶಿ ಅವರಿಗೆ ಅಕ್ರಮಿಗಳನ್ನು ಕಂಡರೆ ಅಷ್ಟೊಂದು ಅಕ್ಕರೆಯೇ?’ ಎಂದು #ಕೋಡೀಲರ್‌ಹಳ್ಳಿ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಉಲ್ಲೇಖಿಸಿದೆ.
‘ರೈತ ಹೋರಾಟದ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಡೀಲ್ ರಾಜರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಅನುಕಂಪ ತೋರಿಸುತ್ತಾರೆ. ಡೀಲ್ ಮೂಲಕ ಸಂಗ್ರಹವಾದ ಅಕ್ರಮ ಹಣ ಎಲ್ಲಿ ತಲುಪುತ್ತಿದೆ, ಕೆಪಿಸಿಸಿ ಕಚೇರಿಯನ್ನೋ? ಅಥವಾ ಸದಾಶಿವ ನಗರದ ಬಂಗಲೆಯನ್ನೋ’ ಎಂದು ಬಿಜೆಪಿ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.