ADVERTISEMENT

‘ನಾಯಿಗಳಿಗೆ ಬಿಸ್ಕತ್‌ ಹಾಕಿದಂತಾಯ್ತು’ :ಎಚ್.ಡಿ.ಕುಮಾರಸ್ವಾಮಿ

ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:05 IST
Last Updated 29 ನವೆಂಬರ್ 2019, 19:05 IST
ಕೆಂಗೇರಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ಮಾಡಿದರು. ಶಾಸಕರಾದ ಗೌರಿಶಂಕರ್‌, ವೀರಭದ್ರಯ್ಯ, ಶ್ರೀನಿವಾಸಮೂರ್ತಿ ಹಾಗೂ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ ಇದ್ದಾರೆ
ಕೆಂಗೇರಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ಮಾಡಿದರು. ಶಾಸಕರಾದ ಗೌರಿಶಂಕರ್‌, ವೀರಭದ್ರಯ್ಯ, ಶ್ರೀನಿವಾಸಮೂರ್ತಿ ಹಾಗೂ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ ಇದ್ದಾರೆ   

ಬೆಂಗಳೂರು: ‘ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ದುಡ್ಡು ಕೊಟ್ಟರೂ, ಶಾಸಕರು ದ್ರೋಹ ಮಾಡಿದರು. ನಾಯಿಗಳಿಗೆ ಬಿಸ್ಕತ್‌ ಹಾಕಿದ ಹಾಗೆ ಆಯ್ತು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರೋಡ್‌ಶೋಗಳನ್ನು ನಡೆಸಿದ ಅವರು ‘ಪಕ್ಷದ ಕಾರ್ಪೊರೇಟರ್‌ಮಹದೇವ್ಎಸೆಯೋ ಬಿಸ್ಕತ್‌ ಆಸೆಗೆ ಹಿಂದೆ ಹೋಗಿದ್ದಾನೆ. ಅವನು ಹೆಬ್ಬೆಟ್ಟು, ಅವನು ಗೋಪಾಲಯ್ಯ ಹೇಳಿದ ಕಡೆ ಸಹಿ ಹಾಕ್ತಾನೆ’ ಎಂದು ಛೇಡಿಸಿದರು.

‘ಗಿರೀಶ್ ಅವರನ್ನು ನನ್ನ ಸಮಾಜದ ಬಂಧುಗಳು ಆಯ್ಕೆ ಮಾಡಿದ್ದಾರೆ.ನಾನು ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಗಳನ್ನು ಆಲಿಸುತ್ತೇನೆ. ಒಕ್ಕಲಿಗರನ್ನು ಮುಖ್ಯಮಂತ್ರಿಯ ಕುರ್ಚಿಯಿಂದ ಇಳಿಸಿ ಬಿಜೆಪಿಯತ್ತ ಹೋದಿರಿ, ರಾಜ್ಯದ ಯಾವಜಿಲ್ಲೆಗೆ ಅನ್ಯಾಯ ಮಾಡಿದೆವು ಹೇಳಿ?ಕುಮಾರಸ್ವಾಮಿಯಿಂದ ನಿಮಗೆ ಅನ್ಯಾಯ ಅಗುವುದಿಲ್ಲ, ನಿಮ್ಮ ಮನೆ ಮಗ ಅಂತ ಗಿರೀಶ್ ಅವರನ್ನು ಗೆಲ್ಲಿಸಿ’ ಎಂದು ಭಾವುಕರಾಗಿ ನುಡಿದರು.

ADVERTISEMENT

‘ಬೆಂಗಳೂರು ನಗರದ ಅಭಿವೃದ್ಧಿಗೆ ಜೆಡಿಎಸ್‌ ಕೊಡುಗೆ ದೊಡ್ಡದಿದೆ. ನಾನು 2006ರಲ್ಲಿ ನೀಡಿದ ಯೋಜನೆಗಳಿಂದಾಗಿಯೇ ನಗರ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವಂತಾಗಿದೆ. ಇದನ್ನು ನಾನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿಲ್ಲ’ ಎಂದರು.

ಯಶವಂತಪುರದಲ್ಲಿಕುಮಾರಸ್ವಾಮಿ ಮಾತನಾಡಿ, ‘ಈ ಉಪಚುನಾವಣೆ ಫಲಿತಾಂಶ ರಾಜ್ಯದಲ್ಲಿ ಗುರುತರ ಬದಲಾವಣೆ ತರಲಿದೆ. ರಾಜಕಾರಣದಲ್ಲಿ ಶುದ್ಧೀಕರಣ ತರಲು ಕ್ಷೇತ್ರದ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಕೋರಿದರು.

‘ನೆರೆ ಸಂತ್ರಸ್ತರ ನೆರವಿಗೆ ಬಾರದ ಸಚಿವರು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಪಕ್ಷಾಂತರ ಮಾಡಿದ ಅಭ್ಯರ್ಥಿ
ಗಳ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಶಾಸಕರನ್ನು ಖರೀದಿ ಮಾಡಬಹುದಿತ್ತು. ಅಧಿಕಾರಕ್ಕಾಗಿ ನಾಡಿನ ಜನರ ತೆರಿಗೆ ಹಣವನ್ನು ಪೋಲು ಮಾಡಲು ಸಿದ್ಧನಿಲ್ಲ’ ಎಂದರು.

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಬಿಎಸ್‌ವೈ’

ರಾಜರಾಜೇಶ್ವರಿನಗರ: ‘ಪಾಪದ ಹಣ ಸಂಗ್ರಹಿಸಿ ಅನರ್ಹರಿಗೆ ನೀಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಜನರು ಅನರ್ಹರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಪರವಾಗಿ ಮುದ್ದಿನಪಾಳ್ಯ, ಬ್ಯಾಡರಹಳ್ಳಿ, ಅಂಜನಾನಗರದಲ್ಲಿ ಶುಕ್ರವಾರ ಮತ ಯಾಚನೆ ಮಾಡಿದ ಅವರು, ‘ಜೆಡಿಎಸ್ 5 ಶಾಸಕರು, ಕಾಂಗ್ರೆಸ್‍ನ 25 ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಅಯೋಗ್ಯರಾದ ಸಿ.ಟಿ.ರವಿ, ಶ್ರೀರಾಮುಲು ಹೇಳುತ್ತಾರೆ, ಇವರಿಗೆ ಏನಾಗಿದೆ. ಉಪಚುನಾವಣೆ ನಂತರ ಸರ್ಕಾರ ಉಳಿಸಿಕೊಳ್ಳಲಿ ನೋಡೋಣ’ ಎಂದು ಸವಾಲು ಹಾಕಿದರು.

ಜವರಾಯಿಗೌಡ ಕಣ್ಣೀರು

ಕೆಂಗೇರಿ: ‘ಮತ್ತೊಮ್ಮೆ ಸೋಲಾದರೆ ನನ್ನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ. ದಯಮಾಡಿ ನನಗೆ ಈ ಬಾರಿ ಗೆಲ್ಲಿಸಿಕೊಡಬೇಕು’ ಎಂದು ಯಶವಂತಪುರದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು ಹಾಕಿ ಮನವಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಎರಡು ಬಾರಿ ನಾನು ಕ್ಷೇತ್ರದಲ್ಲಿ ಸ್ಫರ್ಧೆ ಮಾಡಿದ್ದೆ. ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ಸ್ಪರ್ಧೆ ಮಾಡಲು ಮುಂದೆ ನನಗೆ ಸಾಧ್ಯವಿಲ್ಲ. ಈ ಬಾರಿಯಾದರೂ ನನ್ನನ್ನು ಬೆಂಬಲಿಸಬೇಕು’ ಎಂದು ಕೋರಿದರು.

‘2006ರ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಹಲವು ಭಾಗಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿತ್ತು. ಅದರಿಂದಲೇ ಇಲ್ಲಿನ ಬಡಾವಣೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.