ಬೆಂಗಳೂರು: ‘ಯಾವುದೇ ಕಾರಣಕ್ಕೂ ಸಚಿವ ಆನಂದ್ ಸಿಂಗ್ ಬಿಜೆಪಿ ಬಿಡುವುದಿಲ್ಲ’ ಎಂದು ಸಚಿವ ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಜೊತೆ ನಾವೆಲ್ಲಾ ಮಂಗಳವಾರ ಮಾತಾಡಿದ್ದೇವೆ. ಆನಂದ್ ಸಿಂಗ್ ಶಾಂತವಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಮತ್ತೆ ಭೇಟಿ ಮಾಡಲಿದ್ದಾರೆ’ ಎಂದರು.
‘ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಮುಂದುವರೆಯುತ್ತಾರೆ. ಅಸಮಾಧಾನ ಇದ್ದರೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ. ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಆನಂದ್ ಸಿಂಗ್, ರಾಜೂಗೌಡ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದಾರೆ. ಎರಡು ದಿನಗಳ ಹಿಂದೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ನಮ್ಮ ಮನೆಗೆ ಬಂದಿದ್ದರು. ಅವರಿಗೂ ಯಾವುದೇ ಅಸಮಾಧಾನ ಇಲ್ಲ’ ಎಂದು ಹೇಳಿದರು.
‘ಪ್ರೀತಂ ಗೌಡ ಮಾತನಾಡಿತುವ ವಿಷಯ ಮುಗಿದ ಅಧ್ಯಾಯ. ಎಂಟಿಬಿ ಕೂಡ ನಮ್ಮ ಜತೆಯಲ್ಲೇ ವಿಮಾನ ಹತ್ತಿದವರು. ಸೋತಿದ್ದರೂ ಎಂಎಲ್‌ಸಿ ಮಾಡಿ ಮಂತ್ರಿ ಮಾಡಿದ್ದೀವಿ. ಸಿಎಂ ಜಾಣ್ಮೆಯಿಂದ ಕೆಲಸ ಮಾಡ್ತಿದ್ದಾರೆ ಹಾಗೂ ಅವರ ನಡೆ ಪಾಸಿಟಿವ್ ಆಗಿದೆ’ ಎಂದೂ ಅಶೋಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.