ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ‘ನಮ್ಮ ಮೆಟ್ರೊ’ದ ಕೆ.ಆರ್.ಪುರ–ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ–ಚಲ್ಲಘಟ್ಟದ ವಿಸ್ತರಿತ ಮಾರ್ಗವನ್ನು (ನೇರಳೆ ಮಾರ್ಗ) ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ವರ್ಚುವಲ್ ಮೂಲಕ ಶುಕ್ರವಾರ ಉದ್ಘಾಟಿಸಿದರು. ವರ್ಚುವಲ್ ಸಭೆ ಮೂಲಕ ಬೆಂಗಳೂರಿನಿಂದ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲೇ ಭಾಷಣ ಮಾಡಿದರು.
ಉದ್ಘಾಟನೆ ವೇಳೆ ಸಿದ್ದರಾಮಯ್ಯ ಅವರಿಗೆ ‘ನಿಮ್ಮ ಫೋಟೊವನ್ನೂ ಹಾಕಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಎಲ್ಲಿದೆ ಎಂದು ಸಿದ್ದರಾಮಯ್ಯ ಸಹ ಕೇಳಿದರು. ನಂತರ ಪರದೆಯ ಮೇಲೆ ಬಂದ ಅವರ ಫೋಟೊವನ್ನು ವೀಕ್ಷಿಸಿದರು. ಅಲ್ಲೇ ಇದ್ದವರೊಬ್ಬರು, ಯಾವ ಭಾಷೆಯಲ್ಲಿ ಮಾತನಾಡುತ್ತೀರಿ ಎಂದಾಗ, ‘ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕರ್ನಾಟಕದಲ್ಲಿ ನಾನು ಭಾಷಣ ಮಾಡುತ್ತಿರುವುದು. ಅವರಿಗೋಸ್ಕರ ಇಂಗ್ಲೀಷ್‌ನಲ್ಲಿ ಭಾಷಣ ಮಾಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.