ADVERTISEMENT

ನಿಗಮ–ಮಂಡಳಿ: ಶಾಸಕ ವಿಶ್ವಾಸ್ ಸೇರಿ 11 ಮಂದಿಗೆ ಉಪಾಧ್ಯಕ್ಷ ಪಟ್ಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಿಗಮ–ಮಂಡಳಿಗಳ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಮತ್ತೊಂದು ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ADVERTISEMENT

ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿರುವ ಮುಖ್ಯಮಂತ್ರಿ, ಈ ಕುರಿತು ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.

ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ್‌ ವಸಂತ ವೈದ್ಯ ಅವರನ್ನು ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರನ್ನು ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌ನ ಉಪಾಧ್ಯಕ್ಷ ಹಾಗೂ ಐಶ್ವರ್ಯಾ ಮಹಾದೇವ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹುದ್ದೆಗೆ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ. 

ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌ಗೆ ಏರ್‌ವೈಸ್ ಮಾರ್ಷಲ್‌ ಅಜೀಜ್ ಜಾವೀದ್, ಲೆಫ್ಟಿನೆಂಟರ್‌ ಜನರಲ್‌  ಬಿ.ಎನ್‌.ಬಿ.ಎಂ.ಪ್ರಸಾದ್, ಕರ್ನಲ್‌ ಮಲ್ಲಿಕಾರ್ಜುನ ಟಿ ನಿರುಪಾ ಮಾದಪ್ಪ ಮತ್ತು ರೀನಾ ಮುತ್ತಣ್ಣ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಹಿಂದೆ ಎಐಸಿಸಿ ಅನುಮೋದಿಸಿದ್ದ 32 ನಿಗಮ–ಮಂಡಳಿಗಳ ಅಧ್ಯಕ್ಷರ ನೇಮಕದ ಪಟ್ಟಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವಂತೆಯೂ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರು:

*ಎಚ್‌.ಡಿ.ಗಣೇಶ್; ಮೈಸೂರು ಪೈಂಟ್ಸ್‌ ಮತ್ತು ವಾರ್ನಿಷ್ ಲಿಮಿಟೆಡ್‌

*ನಿಕೇತ್ ರಾಜ್‌ ಎಂ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)

ಉಪಾಧ್ಯಕ್ಷರು:

*ಪ್ಯಾರಿ ಜಾನ್‌; ಕರ್ನಾಟಕ ರಾಜ್ಯ ಕಾಂಪೋಸ್ಟ್‌ ಅಭಿವೃದ್ದಿ ನಿಗಮ

*ಸುನೀಲ್ ಜೆ.ಹನುಮಣ್ಣನವರ್; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

*ಎಸ್.ವಿ.ತಂಬಿದೊರೈ;ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ

*ವಿ.ಎಸ್‌.ಆರಾಧ್ಯ;ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

*ಸಿ.ಎಸ್‌.ಅರುಣ್ ಮಾಚಯ್ಯ; ಕರ್ನಾಟಕ ಕ್ರೀಡಾ ಪ್ರಾಧಿಕಾರ

*ಎಚ್‌.ಲಕ್ಷ್ಮಣ; ಕರ್ನಾಟಕ ಸ್ಟೇಟ್‌ ಮಿನರಲ್ಸ್‌, ಕಾರ್ಪೊರೇಷನ್

*ವಿಜಯಲಕ್ಷ್ಮಿ;ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.