ADVERTISEMENT

Karnataka Covid Updates: 738 ಹೊಸ ಪ್ರಕರಣಗಳು ದಾಖಲು

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 16:42 IST
Last Updated 21 ಜೂನ್ 2022, 16:42 IST
   

ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 738 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5,020ಕ್ಕೆ ಏರಿದ್ದು, ಇಂದು 646 ಮಂದಿ ಗುಣಮುಖರಾಗಿದ್ದಾರೆ.

24 ಗಂಟೆಗಳಲ್ಲಿ 19,624 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ದೈನಂದಿನ ಕೋವಿಡ್ ದೃಢ ಪ್ರಮಾಣ ಶೇಕಡ 3.76ರಷ್ಟಿದೆ.

ADVERTISEMENT

ಬೆಂಗಳೂರು ನಗರದಲ್ಲಿ ಎಂದಿನಂತೆ ಅತಿ ಹೆಚ್ಚು 698 ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ಕನ್ನಡ ತ್ತು ಮೈಸೂರಿನಲ್ಲಿ ತಲಾ 13, ಧಾರವಾಡ, ಬಳ್ಳಾರಿ ಮತ್ತು ತುಮಕೂರಿನಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.