ADVERTISEMENT

Karnataka Covid-19 Update: 257 ಮಂದಿಗೆ ಕೋವಿಡ್ ದೃಢ, ಐವರು ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2021, 18:05 IST
Last Updated 29 ನವೆಂಬರ್ 2021, 18:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಇಳಿಮುಖವಾಗಿವೆ. ಸೋಮವಾರ257 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ಸೋಂಕಿಗೊಳಪಟ್ಟವರ ಸಂಖ್ಯೆ 29.95 ಲಕ್ಷಕ್ಕೆ ಮುಟ್ಟಿದ್ದು,ಸೋಂಕು ದೃಢ ಪ್ರಮಾಣವು ಶೇ 0.45ಕ್ಕೆ ತಗ್ಗಿದೆ.

ಕೋವಿಡ್‌ ಪೀಡಿತರ ಪೈಕಿ ಮತ್ತೆ 5 ಮಂದಿ ಅಸುನೀಗಿದ್ದಾರೆ. ಹೀಗಾಗಿ ಮೃತರ ಒಟ್ಟು ಸಂಖ್ಯೆ38,203ಕ್ಕೆ ಏರಿದೆ. ಮರಣ ಪ್ರಮಾಣ ದರವು ಶೇ1.94ರಷ್ಟಿದೆ.

ಒಂದು ದಿನದಲ್ಲಿ205 ಜನರಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 29.50 ಲಕ್ಷದಷ್ಟಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿದ್ದು,ಸದ್ಯ6,878 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ 56,825 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.‌

ಬೆಂಗಳೂರಿನಲ್ಲಿ ಹೊಸದಾಗಿ 131 ಜನರಿಗೆ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ 11, ಹಾಸನದಲ್ಲಿ 21, ಕೊಡಗು ಜಿಲ್ಲೆಯಲ್ಲಿ 14, ಮೈಸೂರಿನಲ್ಲಿ 15 ಹಾಗೂ ತುಮಕೂರಿನಲ್ಲಿ 23 ಪ್ರಕರಣಗಳು ವರದಿಯಾಗಿವೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಮಂಡ್ಯ, ರಾಯಚೂರು, ರಾಮನಗರ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 9 ಜಿಲ್ಲೆಗಳಲ್ಲಿ ಇದು ಒಂದಂಕಿಯಷ್ಟಿದೆ.

ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದು, ಕೋಲಾರ, ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.