ADVERTISEMENT

23 ಜಿಲ್ಲೆಗಳ 130 ತಾಲ್ಲೂಕು ‘ಪ್ರವಾಹಪೀಡಿತ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 1:46 IST
Last Updated 11 ಸೆಪ್ಟೆಂಬರ್ 2020, 1:46 IST
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಪಶು ಆಸ್ಪತ್ರೆಯೊಂದು ನೀರಲ್ಲಿ ಮುಳುಗಿರುವುದು
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಪಶು ಆಸ್ಪತ್ರೆಯೊಂದು ನೀರಲ್ಲಿ ಮುಳುಗಿರುವುದು    

ಬೆಂಗಳೂರು: ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲ್ಲೂಕುಗಳು’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಪ್ರವಾಹಪೀಡಿತ ಎಂದು ಘೋಷಿಸಿದ ತಾಲ್ಲೂಕುಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಪ್ರಕಾರ ಮತ್ತು ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳ ಪ್ರಕಾರ ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ದಾವಣಗೆರೆ, ಕೊಪ್ಪಳ, ಕೊಡಗು ತಲಾ 3, ಚಾಮರಾಜನಗರ, ಮಂಡ್ಯ ತಲಾ 1, ಮೈಸೂರು, ವಿಜಯಪುರ, ಗದಗ ತಲಾ 4, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ತಲಾ 6, ರಾಯಚೂರು, ಯಾದಗಿರಿ, ಬೀದರ್, ಹಾಸನ ತಲಾ 5, ಕಲಬುರ್ಗಿ, ಬಾಗಲಕೋಟೆ ತಲಾ 9, ಬೆಳಗಾವಿ 14, ಧಾರವಾಡ, ಶಿವಮೊಗ್ಗ, ಉಡುಪಿ ತಲಾ 7, ಉತ್ತರ ಕನ್ನಡ ಜಿಲ್ಲೆಯ 10 ತಾಲ್ಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.