ADVERTISEMENT

ಕೃಷಿ ಸಲಕರಣೆ, ಯಂತ್ರೋಪಕರಣ ಖರೀದಿ: ಕೇಂದ್ರಕ್ಕೆ ₹250 ಕೋಟಿಯ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 13:54 IST
Last Updated 17 ಡಿಸೆಂಬರ್ 2025, 13:54 IST
<div class="paragraphs"><p>ಎನ್‌. ಚಲುವರಾಯಸ್ವಾಮಿ</p></div>

ಎನ್‌. ಚಲುವರಾಯಸ್ವಾಮಿ

   

ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಕೃಷಿ ಸಲಕರಣೆ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಬಂದಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿ ₹ 250 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಸವರಾಜ್‌ ನೀಲಪ್ಪ ಶಿವಣ್ಣನವರ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ರೈತರಿಗೆ ಕೃಷಿ ಸಲಕರಣೆ ಮತ್ತು ಯಂತ್ರೋಪಕರಣ ಖರೀದಿಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ 3.20 ಲಕ್ಷ ರೈತರಿಗೆ ₹ 1,250 ಕೋಟಿ ಮೊತ್ತದ ಸಹಾಯಧನ ವಿತರಿಸಲಾಗಿದೆ. ಅಲ್ಲದೆ, ₹ 127 ಕೋಟಿ ವೆಚ್ಚದ ಹೈಟೆಕ್‌ ಕಟಾವು ಹಬ್‌ ವಿತರಿಸಲಾಗಿದೆ. ಹೀಗೆ ಕೃಷಿ ಸಲಕರಣೆ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲು 2023-24ರಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ ₹ 200 ಕೋಟಿ ಪಡೆದುಕೊಳ್ಳಲಾಗಿತ್ತು’ ಎಂದು ವಿವರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.