ADVERTISEMENT

ಗಾಯತ್ರಿ ನಾವಡ, ಸಬರದಗೆ ತಜ್ಞ ಪ್ರಶಸ್ತಿ

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:09 IST
Last Updated 4 ಜನವರಿ 2021, 19:09 IST
ಗಾಯತ್ರಿ ನಾವಡ
ಗಾಯತ್ರಿ ನಾವಡ   

ಚಾಮರಾಜನಗರ: ಕರ್ನಾಟಕ ಜಾನ ಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗಿದೆ.

ಡಾ. ಜೀ.ಶಂ. ಪರಮಶಿವಯ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಹಾಗೂ ಡಾ.ಬಿ.ಎಸ್‌.ಗದ್ದಗೀಮಠ ಪ್ರಶಸ್ತಿಗೆ ಕಲಬುರ್ಗಿಯ ಪ್ರೊ.ಬಸವರಾಜ ಸಬರದ ಆಯ್ಕೆಯಾಗಿದ್ದು, ಈ ತಜ್ಞ ಪ್ರಶಸ್ತಿಗಳು ತಲಾ ₹ 50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿವೆ.

ಇದರೊಂದಿಗೆ, ಜಿಲ್ಲೆಗೊಬ್ಬ ಹಿರಿಯ ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪುರಸ್ಕೃತರ ಹೆಸರುಗಳನ್ನು ಅಕಾಡೆಮಿಯ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ADVERTISEMENT
ಪ್ರೊ.ಬಸವರಾಜ ಸಬರದ

ಕಲಾವಿದರ ಗೌರವ ಪ್ರಶಸ್ತಿಯು ತಲಾ ₹25 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ ಮೊದಲ ವಾರದಲ್ಲಿ ಚಾಮರಾಜನಗರದಲ್ಲಿಯೇ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಶಸ್ತಿಗೆ ಆಯ್ಕೆಯಾದವರು:ಎಂ.ಕೆ.ಸಿದ್ದರಾಜು (ಜನಪದ ಗಾಯನ –ಬೆಂಗಳೂರು,ಹೊನ್ನಗಂಗಮ್ಮ (ಸೋಬಾನೆ ಪದ–ಬೆಂಗಳೂರು ಗ್ರಾಮಾಂತರ),ತಿಮ್ಮಯ್ಯ (ತಮಟೆ ವಾದನ–ರಾಮನಗರ),ಕೆ. ಎನ್. ಚಂಗಪ್ಪ (ಭಜನೆ – ಕೋಲಾರ), ನಾರಾಯಣಪ್ಪ (ಕೀಲು ಕುದುರೆ– ಚಿಕ್ಕಬಳ್ಳಾಪುರ),ಸಿ.ವಿ.ವೀರಣ್ಣ (ವೀರಭದ್ರನ ಕುಣಿತ–ತುಮಕೂರು),ಭಾಗ್ಯಮ್ಮ (ಸೋಬಾನೆ ಹಾಡುಗಾರಿಕೆ–ದಾವಣಗೆರೆ),ಕೆಂಚಮ್ಮ (ಮದುವೆ ಹಾಡು–ಚಿತ್ರದುರ್ಗ), ಕೆ.ಯುವರಾಜ್‌ (ಜನಪದ ಗಾಯನ–ಶಿವಮೊಗ್ಗ),ಕುಮಾರಸ್ವಾಮಿ (ಕಂಸಾಳೆ ಹಾಡುಗಾರಿಕೆ–ಮೈಸೂರು),ಭೂಮಿಗೌಡ (ಕೋಲಾಟ–ಮಂಡ್ಯ),ಗ್ಯಾರಂಟಿ ರಾಮಣ್ಣ (ಹಾಡುಗಾರಿಕೆ–ಹಾಸನ), ಭೋಗಪ್ಪ ಎಂ.ಸಿ (ಚೌಡಿಕೆ ಪದ–ಚಿಕ್ಕಮಗಳೂರು), ಗೋಪಾಲಕೃಷ್ಣ ಬಂಗೇರಾ (ಗೊಂಬೆ ಕುಣಿತ–ದಕ್ಷಿಣ ಕನ್ನಡ),ರಮೇಶ್ ಕಲ್ಮಾಡಿ (ಕರಗ ಕೋಲಾಟ–ಉಡುಪಿ),ಕೆ.ಕೆ.ಪೊನ್ನಪ್ಪ‌ (ಬೊಳೋಪಾಟ್–ಕೊಡಗು),ಹೊನ್ನಮ್ಮ (ಸೋಬಾನೆ ಪದ–ಚಾಮರಾಜನಗರ), ಮುತ್ತಪ್ಪ ಅಲ್ಲಪ್ಪ ಸವದಿ (ತತ್ವ ಪದ–ಬೆಳಗಾವಿ),ಮಲ್ಲೇಶಪ್ಪ ಫಕೀರಪ್ಪ ತಡಸದ (ತತ್ವಪದ–ಧಾರ ವಾಡ),ಸುರೇಶ ರಾಮಚಂದ್ರ ಜೋಶಿ (ಡೊಳ್ಳಿನ ಹಾಡುಗಾರಿಕೆ–ವಿಜಯಪುರ),ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ (ತತ್ವಪದ ಮತ್ತು ಭಜನೆ–ಬಾಗಲಕೋಟೆ),ಸಹದೇವಪ್ಪ ಈರಪ್ಪ ನಡಗೇರಾ (ಲಾವಣಿ ಪದ –ಉತ್ತರಕನ್ನಡ),ಬಸವರಾಜ ತಿರುಕಪ್ಪ ಶಿಗ್ಗಾಂವಿ (ತತ್ವಪದ–ಹಾವೇರಿ), ಮುತ್ತಪ್ಪ ರೇವಣಪ್ಪ ರೋಣದ (ಪುರವಂತಿಕೆ–ಗದಗ), ಸಾಯಬಣ್ಣ (ಹಲಗೆ ವಾದನ–ಕಲಬುರ್ಗಿ),ವೈಜಿನಾಥಯ್ಯ ಸಂಗಯ್ಯಸ್ವಾಮಿ (ಚಕ್ರಿಭಜನೆ–ಬೀದರ್),ಜಂಬಣ್ಣ (ಹಗಲುವೇಷ–ರಾಯಚೂರು),ತಿಪ್ಪಣ್ಣ ಅಂಬಾಜಿ ಸುಗತೇಕರ (ಗೋಂದಲಿಗರು–ಕೊಪ್ಪಳ),ಗೋಂದಳಿ ರಾಮಪ್ಪ (ಗೋಂದಳಿ ಪದ–ಬಳ್ಳಾರಿ), ಗೋಗಿ ಬಸವಲಿಂಗಮ್ಮ (ಮದುವೆ ಹಾಡು–ಯಾದಗಿರಿ)

ಡಾ.ಬಾಳಾಸಾಹೇಬ ಲೋಕಾಪುರ

ಬಾಳಾಸಾಹೇಬಗೆ ಗಳಗನಾಥ ಸಾಹಿತ್ಯ, ಹನುಮಾಕ್ಷಿಗೆ ರಾಜಪುರೋಹಿತ ಸಂಶೋಧಕ ಪ್ರಶಸ್ತಿ

ಬೆಳಗಾವಿ: ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದಿಂದ ನೀಡುವ 2019ನೇ ಸಾಲಿನ ‘ಗಳಗನಾಥ ಸಾಹಿತ್ಯ’ ಪ್ರಶಸ್ತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಹಾಗೂ ನಾ.ಶ್ರೀ. ರಾಜಪುರೋಹಿತ ಸಂಶೋಧಕ ಪ್ರಶಸ್ತಿಗೆ ಡಾ.ಹನುಮಾಕ್ಷಿ ಗೋಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.ಹನುಮಾಕ್ಷಿ ಗೋಗಿ

ಪ್ರಶಸ್ತಿಯು ತಲಾ ₹ 50 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.

‘ಇಲ್ಲಿನ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಜ.5ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಪ್ರದಾನ ಮಾಡುವರು. ‘ರಂಗ ಸಂಪದ’ದ ಅಧ್ಯಕ್ಷ ಡಾ.ಅರವಿಂದ ವಿ. ಕುಲಕರ್ಣಿ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾ.ವೆಂಕಟಗಿರಿ ದಳವಾಯಿ ಮತ್ತು ನಿವೃತ್ತ ಪ್ರಾಚಾರ್ಯೆ ಡಾ.ಸ್ಮಿತಾ ಸುರೇಬಾನಕರ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡುವರು. ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಪ್ರತಿಷ್ಠಾನದ ಅಧ್ಯಕ್ಷಪ್ರೊ.ದುಶ್ಯಂತ ನಾಡಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.