
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬೆಂಗಳೂರು ವಕೀಲರ ಸಂಘದ (ಎಎಬಿ) ಕರ್ನಾಟಕ ಹೈಕೋರ್ಟ್ ಆಡಳಿತ ನ್ಯಾಯಮಂಡಳಿ ವಿಭಾಗದ ಸಂಚಾಲಕರನ್ನಾಗಿ ಹೈಕೋರ್ಟ್ ವಕೀಲ ಆತ್ಮ ವಿ.ಹಿರೇಮಠ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಮತ್ತೊಬ್ಬ ಹೈಕೋರ್ಟ್ ವಕೀಲ ಎಚ್.ಎನ್.ತಮ್ಮಯ್ಯ ಅವರನ್ನು ಡಿಆರ್‌ಟಿ ಕಮರ್ಶಿಯಲ್ ನ್ಯಾಯಾಲಯದ ವಿಭಾಗಕ್ಕೆ ಸಂಚಾಲಕರನ್ನಾಗಿ ನೇಮಕ ಮಾಡಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.