ADVERTISEMENT

ಪ್ರಜಾವಾಣಿಯ ಹನೀಫ್‌, ರಶ್ಮಿ ಸೇರಿ 18 ಮಂದಿಗೆ ಪತ್ರಕರ್ತರ ಸಂಘದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:27 IST
Last Updated 27 ಸೆಪ್ಟೆಂಬರ್ 2021, 18:27 IST
   

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2019ನೇ ಸಾಲಿನ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗೆ ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್‌ ಮತ್ತು ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥೆ ರಶ್ಮಿ ಎಸ್‌. ಸೇರಿದಂತೆ 14 ಜನರು ಹಾಗೂ ವಿಶೇಷ ಪ್ರಶಸ್ತಿಗೆ ನಾಲ್ವರು ಭಾಜನರಾಗಿದ್ದಾರೆ.

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿಗೆ ಬಿ.ಎಂ. ಹನೀಫ್, ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಎಸ್.ಕೆ. ಶೇಷಚಂದ್ರಿಕ, ಎಸ್‌.ವಿ. ಜಯಶೀಲರಾವ್‌ ಪ್ರಶಸ್ತಿಗೆ ಅ.ಚ. ಶಿವಣ್ಣ, ಡಿವಿಜಿ ಪ್ರಶಸ್ತಿಗೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ ಸಂಪಾದಕ ರವಿ ಹೆಗಡೆ ಮತ್ತುಯಶೋಧಮ್ಮ ಜಿ. ನಾರಾಯಣ ಪ್ರಶಸ್ತಿಗೆ ರಶ್ಮಿ ಎಸ್‌. ಆಯ್ಕೆಯಾಗಿದ್ದಾರೆ.

ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಗೊಮ್ಮಟವಾಣಿ ಸಂಪಾದಕ ಎಸ್‌.ಎನ್‌. ಅಶೋಕ ಕುಮಾರ್‌, ಪಿ.ಆರ್. ರಾಮಯ್ಯ ಪ್ರಶಸ್ತಿಗೆ ಕುಂದಪ್ರಭದ ಸಂಪಾದಕ ಯು.ಎಸ್‌. ಶೆಣೈ, ಗರುಡನಗಿರಿ ನಾಗರಾಜ್‌ ಪ್ರಶಸ್ತಿಗೆ ಮಲೆನಾಡ ಮಂದಾರ ಸಂಪಾದಕ ಕೆ.ಆರ್‌. ಮಂಜುನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಎಚ್‌.ಕೆ. ವೀರಣ್ಣಗೌಡ ಪ್ರಶಸ್ತಿಗೆ ಕೋಡಿ ಹೊಸಳ್ಳಿ ರಾಮಣ್ಣ, ಕಿಡಿ ಶೇಷಪ್ಪ ಪ್ರಶಸ್ತಿಗೆ ಹೊಸಪೇಟೆ ಟೈಮ್ಸ್‌ ಸಂಪಾದಕಿ ಕೆ.ಎಂ. ರೇಖಾ, ಪಿ. ರಾಮಯ್ಯ ಪ್ರಶಸ್ತಿಗೆ ಶಿಡ್ಲು ಪತ್ರಿಕೆ ಸಂಪಾದಕ ರೇವಣ್ಣ ಸಿದ್ದಯ್ಯ ಮಹಾನುಭವಿಮಠ, ಎಂ. ನಾಗೇಂದ್ರರಾವ್‌ ಪ್ರಶಸ್ತಿಗೆ ವಿಜಯವಾಣಿ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ಎನ್‌.ಡಿ.ಶಾಂತಕುಮಾರ್, ಮಿಂಚು ಶ್ರೀನಿವಾಸ್‌ ಪ್ರಶಸ್ತಿಗೆ ವಿಜಯ ಕರ್ನಾಟಕದ ರಾಮಸ್ವಾಮಿ ಹುಲಕೋಡು, ಎಚ್‌.ಎಸ್‌. ರಂಗಸ್ವಾಮಿ ಪ್ರಶಸ್ತಿಗೆ ‘ಸಿಟಿ ಹೈಲೈಟ್ಸ್‌’ ಬೆಂಗಳೂರು ಸಂಪಾದಕ ಪಿ. ಸುನೀಲ್‌ ಕುಮಾರ್‌ ಆಯ್ಕೆಯಾಗಿದ್ದಾರೆ.

ವಿಶೇಷ ಪ್ರಶಸ್ತಿ: ಕನ್ನಡಪ್ರಭದ ರಾಯಚೂರು ವರದಿಗಾರ ಪ್ರಹ್ಲಾದ ಗುಡಿ, ಕೋಲಾರದ ಪತ್ರಕರ್ತ ಮುನಿ ವೆಂಕಟೇಗೌಡ, ವಿಜಯ ಕರ್ನಾಟಕದ ತೀರ್ಥಹಳ್ಳಿಯ ಎಂ.ಕೆ. ರಾಘವೇಂದ್ರ ಮೇಗರವಳ್ಳಿ, ವಾರ್ತಾ ಭಾರತಿಯ ಬೆಂಗಳೂರಿನ ಪ್ರಕಾಶ್‌ ರಾಮಜೋಗಿಹಳ್ಳಿ ಅವರು ಸಂಘದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕ್ಟೋಬರ್‌ 3 ರಂದು ಸಂಜೆ 5ಕ್ಕೆ ಶಿವಮೊಗ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ‍್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.