ಬೆಂಗಳೂರು: ರಾಜ್ಯಕ್ಕೆ ಈಗ ಪರ್ಮನೆಂಟ್ ಸಿಎಂ ಬೇಕಾಗಿದ್ದಾರೆ. ಅತಿಥಿ ಮುಖ್ಯಮಂತ್ರಿಯಿಂದಾಗಿ ರಾಜ್ಯ ಪರಿತಪಿಸುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸರ್ಕಾರದೊಳಗಿನ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯಕ್ಕೆ ಗರಬಡಿದಂತಾಗಿದೆ. ದಿನಬೆಳಗಾದರೆ ನಾನು ಸಿಎಂ, ಅವನು ಸಿಎಂ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕುರ್ಚಿ ಬದಲಾವಣೆಯ ಗುಸುಗುಸು ಸುದ್ದಿಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ ಎಂದು ದೂರಿದೆ.
ರಾಜ್ಯಕ್ಕೆ ಈಗ ಪರ್ಮನೆಂಟ್ ಸಿಎಂ ಬೇಕಾಗಿದೆ. ಅರೆಕಾಲಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರಿಯಾಗಿ ಆಡಳಿತ ನಡೆಸಲಾಗುತ್ತಿಲ್ಲ ಎಂದು ಅವರ(ಸಿಎಂ) ಆಪ್ತರೇ ಹೇಳುತ್ತಿದ್ದಾರೆ ಎಂದು ಕುಟುಕಿದೆ.
ಹೈಕಮಾಂಡ್ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಮುಖ್ಯಮಂತ್ರಿ ಬದಲಾವಣೆ ವಿಚಾರದ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.