ADVERTISEMENT

ಸಾಧಕರಿಗೆ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪ್ರದಾನ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕಲಾವಿದರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 17:02 IST
Last Updated 14 ಜನವರಿ 2022, 17:02 IST
‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪುರಸ್ಕೃತರೊಂದಿಗೆ (ಮುಂದೆ ಕುಳಿತವರು ಎಡದಿಂದ ಬಲಕ್ಕೆ) ಅಕಾಡೆಮಿ ರಿಜಿಸ್ಟ್ರಾರ್ ಎಂ. ಶಾಂತಮ್ಮ, ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ಗರ್ತಿಕೆರೆ ರಾಘವೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಇದ್ದಾರೆ.
‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪುರಸ್ಕೃತರೊಂದಿಗೆ (ಮುಂದೆ ಕುಳಿತವರು ಎಡದಿಂದ ಬಲಕ್ಕೆ) ಅಕಾಡೆಮಿ ರಿಜಿಸ್ಟ್ರಾರ್ ಎಂ. ಶಾಂತಮ್ಮ, ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ಗರ್ತಿಕೆರೆ ರಾಘವೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಇದ್ದಾರೆ.   

ಬೆಂಗಳೂರು: ಸಂಗೀತ–ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020–21 ಮತ್ತು 2021–22ನೇ ಸಾಲಿನ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು.

ನಗರದಲ್ಲಿ ಅಕಾಡೆಮಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿಗಾಯಕ ಗರ್ತಿಕೆರೆ ರಾಘವೇಂದ್ರ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಆರ್‌.ಪಿ. ಅಸುಂಡಿ,ಎಸ್‌.ಎಸ್‌.ಶಿವಾನಂದಸ್ವಾಮಿ ಹಾಗೂ ಎಂ.ಆರ್‌.ರಾಮಮೂರ್ತಿ ಅವರಿಗೆ ‘ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದಿವಂಗತ ರಮಾ ಅರವಿಂದ ಅವರ ಪರವಾಗಿ ಪುತ್ರಿ ಮಾನಸಾ ಹೊಳ್ಳ ಅವರು ಪ್ರಶಸ್ತಿ ಸ್ವೀಕರಿಸಿದರು.ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ.

ವಾರ್ಷಿಕ ಪ್ರಶಸ್ತಿ:ಕರ್ನಾಟಕ ಸಂಗೀತ ವಿಭಾಗದಲ್ಲಿಮಧೂರು ಪಿ. ಬಾಲಸುಬ್ರಹ್ಮಣ್ಯಂ, ಸುಕನ್ಯಾ ರಾಂಗೋಪಾಲ್, ಸುರೂಳಿ ಗಣೇಶ್ ಮೂರ್ತಿ, ವಿ. ಮುರುಳಿ,ಎಚ್‌.ಕೆ.ಬಾಲಕೃಷ್ಣರಾವ್‌, ಎಚ್‌.ಎಸ್‌.ನಾಗರಾಜ್‌,ಟಿ.ಎಸ್‌.ಚಂದ್ರಶೇಖರ ಹಾಗೂರಂಗಸ್ವಾಮಿ ಪ್ರಶಸ್ತಿ ಸ್ವೀಕರಿಸಿದರು.ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿಶ್ರೀಪಾದ ಹೆಗಡೆ, ಪಂ. ರಾಜಪ್ರಭು ದೋತ್ರೆ, ಟಿ. ರಂಗ ಪೈ ತೋನ್ಸೆ,ಅಪ್ಪಣ್ಣಾ ರಾಮಚಂದ್ರ ಶಿರೋಳ,ಬಾಲಚಂದ್ರ ನಾಕೋಡ್‌,ದೇವೇಂದ್ರಕುಮಾರ ಪತ್ತಾರ ಹಾಗೂಡಿ.ಎಸ್‌.ಚಾಳೇಕರ್‌ ಅವರಿಗೆ ಪ್ರಶಸ್ತಿ ನೀಡಲಾಯಿತು.

ADVERTISEMENT

ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದನಯನಾ ರೈ, ಪ್ರವೀಣ್ ಕುಮಾರ್,ಮಧು ನಟರಾಜ್, ಜಿ. ಗುರುಮೂರ್ತಿ,ಕಮಲಾಕ್ಷ ಆಚಾರ್‌,ಪದ್ಮಜಾ ಸುರೇಶ್‌,ವಿದ್ಯಾ ರವಿಶಂಕರ್‌ ಹಾಗೂ ಬಾಲಸುಬ್ರಹ್ಮಣ್ಯಂ ಶರ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಗಮ ಸಂಗೀತದಲ್ಲಿಉಪಾಸನಾ ಮೋಹನ್,ಇಂದ್ರಾಣಿ ಅನಂತರಾಂ,ವಸಂತಕುಮಾರ ಕುಂಬ್ಳೆ, ಕಥಾಕೀರ್ತನದಲ್ಲಿವೈಕುಂಠದತ್ತ ಮಹಾರಾಜ, ಜಿ. ಸೋಮಶೇಖರದಾಸ್, ಕೆ.ವಿ. ಚಂದ್ರಮೌಳಿ ಹಾಗೂ ಗಮಕ ಕ್ಷೇತ್ರದಲ್ಲಿ ಸಾಧನೆಗೆ ಎಚ್.ಎಸ್. ಗೋಪಾಲ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಕೀಬೋರ್ಡ್‌ ವಾದಕ ಗಣೇಶ್ ಭಟ್ ಅವರಿಗೆ ‘ವಿಶೇಷ ಪ್ರಶಸ್ತಿ’ ಹಾಗೂ ಡಿ. ಕೇಶವ್ ಅವರಿಗೆ ‘ಹೊರದೇಶ ಕನ್ನಡ ಕಲಾವಿದರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಾರ್ಷಿಕ ಪ್ರಶಸ್ತಿ ತಲಾ ₹ 25 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ಹೊಂದಿದೆ.

ಪ್ರಶಸ್ತಿ ಪುರಸ್ಕೃತ ಮಧೂರು ಪಿ. ಬಾಲಸುಬ್ರಮಣ್ಯಂ, ‘ಕಲೆಯಲ್ಲಿ ಗುರು–ಶಿಷ್ಯ ಪರಂಪರೆ ಮುಖ್ಯ. ಶಾಸ್ತ್ರೀಯ ಕಲೆ ಔಷಧವಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡಲಿದೆ. ಸರ್ಕಾರ ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿ ಕಲಾ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.