ADVERTISEMENT

ಚಿಕ್ಕಮಗಳೂರು: ಸಾವಿನ ನಂತರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ 22 ವರ್ಷದ ಯುವತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 8:08 IST
Last Updated 14 ಫೆಬ್ರುವರಿ 2022, 8:08 IST
ಟಿ.ಕೆ.ಗಾನವಿ– ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಂಚಿಕೊಂಡಿರುವ ಫೋಟೊಗಳು
ಟಿ.ಕೆ.ಗಾನವಿ– ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಂಚಿಕೊಂಡಿರುವ ಫೋಟೊಗಳು   

ಚಿಕ್ಕಮಗಳೂರು: ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ 22 ವರ್ಷದ ಸ್ಟಾಫ್‌ ನರ್ಸ್‌ ಟಿ.ಕೆ.ಗಾನವಿ ಅವರ ಅಂಗಾಂಗಳನ್ನು ಪೋಷಕರು ದಾನ ಮಾಡಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ‘ಗಾನವಿ ಅವರು ಜೀವಂತವಾಗಿದ್ದಾಗ ರೋಗಿಗಳನ್ನು ಕಾಳಜಿಯಿಂದ ಆರೈಕೆ ಮಾಡಿದರು. ಮರಣದ ನಂತರ ಅವರು ತಮ್ಮ ಅಂಗಾಂಗಗಳನ್ನು ಉಡುಗೊರೆಯಾಗಿ ನೀಡಿದರು. ದುರಂತ ಸಾವಿನ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಿದ 22 ವರ್ಷದ ಸ್ಟಾಫ್ ನರ್ಸ್ ಟಿ.ಕೆ.ಗಾನವಿ ಅವರು ‘ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ’(ಯಾರು ಬೇರೆಯವರಿಗೋಸ್ಕರ ಜೀವಿಸುತ್ತಾರೋ ಅವರು ಮಾತ್ರ ಬದುಕಿರುತ್ತಾರೆ)’ ಎಂದು ತಿಳಿಸಿದ್ದಾರೆ.

‘ಹೃದಯ ವಿದ್ರಾವಕ ದುರಂತದ ನಡುವೆಯೂ ಗಾನವಿ ಕುಟುಂಬದವರು ತೋರಿಸಿದ ದಯೆಗೆ ಹ್ಯಾಟ್ಸ್ ಆಫ್. ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳಲು ಗಾನವಿ ಅವರು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊ ಎಂಟರಾಲಜಿ ಮತ್ತು ಆರ್ಗನ್ ಟ್ರಾನ್ಸ್‌ಪ್ಲಾಂಟ್‌ನಲ್ಲಿ (IGOT) ಅಂಗ ದಾನ ಮಾಡಿದ ಮೊದಲ ಘಟನೆ ಇದಾಗಿದೆ’ ಎಂದು ಸುಧಾಕರ್‌ ಹೇಳಿದ್ದಾರೆ.

ADVERTISEMENT

ಬಾಳೆಹೊನ್ನೂರಿನ ಗಾನವಿ ಅವರುಶಿವಮೊಗ್ಗದಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.