ADVERTISEMENT

ರಾಜ್ಯದ ಹಲವೆಡೆ ತಾಪಮಾನ ಕುಸಿತ: ಧಾರವಾಡದಲ್ಲಿ 9 ಡಿಗ್ರಿ ಸೆಲ್ಸಿಯಸ್ ತಾಪಮಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:35 IST
Last Updated 20 ಡಿಸೆಂಬರ್ 2021, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಒಂದು ವಾರದಿಂದ ತಾಪಮಾನ ಕ್ಷೀಣಿಸುತ್ತಿದ್ದು, ಧಾರವಾಡದಲ್ಲಿ 9.7 ಡಿಗ್ರಿ ಸೆಲ್ಸಿಯಸ್‌ ಅತಿ ಕಡಿಮೆ ತಾಪಮಾನಸೋಮವಾರ ದಾಖಲಾಗಿದೆ.

ತಾಪಮಾನ ಕುಸಿತದಿಂದ ರಾಜ್ಯದಲ್ಲಿ ಚಳಿಯ ತೀವ್ರತೆಯೂ ಹೆಚ್ಚಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ಮುಂಜಾನೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿತ್ತು. ಮಂಜು ಆವರಿಸಿದ್ದರಿಂದ ಗೋಚರತೆ ಕ್ಷೀಣಿಸಿ, ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿತ್ತು.

ಎಲ್ಲೆಲ್ಲಿ ಕಡಿಮೆ ತಾಪಮಾನ: ಆಗುಂಬೆ ಹಾಗೂ ಬಾಗಲಕೋಟೆಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣ, ಬೀದರ್, ವಿಜಯಪುರ, ಹಾವೇರಿ 11, ಶಿವಮೊಗ್ಗ, ಚಿಂತಾಮಣಿ, ದಾವಣಗೆರೆ, ಕೊಪ್ಪಳ 12, ಚಿತ್ರದುರ್ಗ, ರಾಯಚೂರು 13, ಬೆಳಗಾವಿ, ಬೆಂಗಳೂರು, ಚಿಕ್ಕಮಗಳೂರು ಹಾಗೂ ಮಂಡ್ಯದಲ್ಲಿ ತಲಾ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ADVERTISEMENT

‘ಈ ವರ್ಷದ ಹವಾಮಾನ ವೈಪರೀತ್ಯಗಳಿಂದತಾಪಮಾನ ಕುಸಿತವಾಗುತ್ತಿದೆ. ಚಳಿಗಾಲ ಈಗಾಗಲೇ ಆರಂಭಗೊಂಡಿದ್ದು, ತಾಪಮಾನ ಕ್ಷೀಣಿಸಿ ಚಳಿಯ ತೀವ್ರತೆಯೂ ಹೆಚ್ಚಾಗಿದೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಒಣಹವೆ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.