ಬೆಂಗಳೂರು: ‘ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಹೈಕೋರ್ಟ್ ಗರಂ’, ‘ದಂಡ ಹಾಕಿಲ್ಲಾ ಅಂತಾ ಖುಷಿಪಡಿ’ ಎಂಬ ತಲೆಬರಹದಡಿ ಬುಧವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯಲ್ಲಿರುವ ಅಂಶಗಳು ನ್ಯಾಯಪೀಠದ ಮೌಖಿಕ ಹೇಳಿಕೆಯಾಗಿದ್ದು, ಲಿಖಿತ ಆದೇಶದಲ್ಲಿ ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಧ್ಯಮ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.
‘ನ್ಯಾಯಪೀಠ ನೀಡಿರುವ ಲಿಖಿತ ಆದೇಶದಲ್ಲಿ ಈ ರೀತಿಯ ಪದಗಳು ಅಥವಾ ಅಭಿಪ್ರಾಯ ಇಲ್ಲ’ ಎಂದು ಲಿಖಿತ ಸ್ಪಷ್ಟನೆಯಲ್ಲಿ ವಿವರಿಸಿರುವ ಶ್ರೀಧರ ಮೂರ್ತಿ, ‘ಮಾಧ್ಯಮಗಳು ನ್ಯಾಯಪೀಠಗಳ ಮೌಖಿಕ ಹೇಳಿಕೆಗಳನ್ನು ದಾಖಲಿಸುವಾಗ ಸುಪ್ರೀಂ ಕೋರ್ಟ್ ತೀರ್ಪುಗಳ ಅನುಸಾರ ನಡೆದುಕೊಳ್ಳುವ ಅವಶ್ಯಕತೆ ಇದೆ. ತೀರ್ಪಿನ ಪ್ರತಿ ಹೊರ ಬರುವ ಮೊದಲೇ ಮಾಡುವ ವಿಶ್ಲೇಷಣೆಗಳು ತಪ್ಪು ಗ್ರಹಿಕೆಗಳಿಗೆ ಕಾರಣವಾಗುತ್ತವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.