ADVERTISEMENT

ಜಮ್ಮು–ಕಾಶ್ಮೀರಕ್ಕೆ ತೆರಳಿರುವವರ ಮಾಹಿತಿಗಾಗಿ ಹೆಲ್ಪ್‌ಲೈನ್ ಆರಂಭಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 4:28 IST
Last Updated 23 ಏಪ್ರಿಲ್ 2025, 4:28 IST
   

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ವಾಪಸ್ ಕರೆತರಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಬಂಧ ಪ್ರವಾಸಕ್ಕೆ ತೆರಳಿರುವವರ ಮಾಹಿತಿ ನೀಡುವಂತೆ ಪ್ರವಾಸ ನಿರ್ವಹಣೆದಾರರನ್ನು ಕೋರಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಜೊತೆಗೆ, ಪ್ರವಾಸಕ್ಕೆ ತೆರಳಿರುವವರ ಸಂಬಂಧಿಕರು ಮತ್ತು ಸ್ನೇಹಿತರು ಪ್ರವಾಸಿಗರ ಮಾಹಿತಿಯನ್ನು ಈ ಕೆಳಕಂಡ ಹೆಲ್ಪ್‌ಲೈನ್ ಸಂಖ್ಯೆಗೆ ಕರೆಮಾಡಿ ತಿಳಿಸುವಂತೆ ಕೋರಲಾಗಿದೆ.

ಹೆಲ್ಪ್‌ಲೈನ್ ಸಂಖ್ಯೆಗಳು

ADVERTISEMENT

* 080-43344334

* 080-43344335

* 080-43344336

* 080-43344342

ಮೃತರ ಮೃತದೇಹಗಳನ್ನು ಅವರ ಊರುಗಳಿಗೆ ಕಳುಹಿಸಲು ವಿಮಾನಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.

Flight Schedule of the Deceased (1).pdf
ಓಪನ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.