ADVERTISEMENT

CET/NEET | ಆಯ್ಕೆ ದಾಖಲಿಗೆ ಪರಿಷ್ಕೃತ ವೇಳಾಪಟ್ಟಿ; ಆ.14ರಿಂದ ವೈದ್ಯಕೀಯ ಪ್ರವೇಶ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:31 IST
Last Updated 13 ಆಗಸ್ಟ್ 2025, 7:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಯುಜಿ ಸಿಇಟಿ/ನೀಟ್ ಕೋರ್ಸ್‌ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಆಯ್ಕೆ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಪ್ಪದೆ ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ್-ಡಿ, ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್, ಬಿ ಎಸ್ ಸಿ ನರ್ಸಿಂಗ್, ಹೋಮಿಯೋಪಥಿ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರು ಆಯ್ಕೆ ದಾಖಲಿಸಲು ಆಗಸ್ಟ್ 14ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಶುಲ್ಕ ಪಾವತಿಗೆ ಆಗಸ್ಟ್ 14ರಂದು ಸಂಜೆ 4ರವರೆಗೆ ಅವಕಾಶ‌ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 15 ಕೊನೆ ದಿನ. ಈ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ. ದಿನಾಂಕ ಕೂಡ ವಿಸ್ತರಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ವೈದ್ಯಕೀಯ: ಆ.14ರಿಂದ ಆಯ್ಕೆ ದಾಖಲು

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರಿಗೆ ಆಯ್ಕೆ ದಾಖಲಿಸಲು ಆಗಸ್ಟ್ 14ರಂದು ಮಧ್ಯಾಹ್ನ 1 ಗಂಟೆಯಿಂದ ಲಿಂಕ್ ತೆರೆಯಲಾಗುವುದು. ಆಗಸ್ಟ್ 16ರವರೆಗೆ ಆಯ್ಕೆ ದಾಖಲಿಸಬಹುದು. ಶುಲ್ಕ ಪಾವತಿಸಲು ಆಗಸ್ಟ್ 18 ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 19 ಕೊನೆ ದಿನ ಎಂದು ಅವರು ತಿಳಿಸಿದ್ದಾರೆ.

ಛಾಯ್ಸ್-1 ಆಯ್ಕೆ ಮಾಡಿದವರು ಆನ್ ಲೈನ್ ನಲ್ಲಿ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಎಲ್ಲ ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಮೂಲ ದಾಖಲೆಗಳ ಪರಿಶೀಲನೆ‌ ಕಾಲೇಜು ಹಂತದಲ್ಲೇ ಆಗುತ್ತದೆ. ಹೀಗಾಗಿ ಕ್ಲೇಮ್ ಪ್ರಕಾರ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ದಾಖಲೆಗಳು ಸರಿ ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕಾಲೇಜುಗಳಿಗೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ರಜೆ‌ ಇಲ್ಲ

ಪ್ರವೇಶ ಪ್ರಕ್ರಿಯೆಗೆ ಸಮಯದ ಅಭಾವ ಇರುವ ಕಾರಣ ಎಲ್ಲ ರಜೆ ದಿನಗಳಂದೂ ಕಾಲೇಜುಗಳು ಕಾರ್ಯನಿರ್ವಹಿಸಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.