ಶಿರಸಿ: ಕಾಳಿಂಗ ಸರ್ಪವೊಂದು ದೊಡ್ಡ ಗಾತ್ರದ ಉಡವನ್ನು ನುಂಗಲು ಯತ್ನಿಸಿದ ಘಟನೆ ತಾಲ್ಲೂಕಿನ ಗಡಿಭಾಗವಾದ ಯಾಣ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ. ಉಡದ ಗಾತ್ರದೊಡ್ಡದಾದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ನುಂಗಲಾಗದೇ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ. ಹಾವಿನ ಬೇಟೆ ಯತ್ನಕ್ಕೆ ಸಿಲುಕಿದ ಉಡವೂ ಸಾವನ್ನಪ್ಪಿದೆ.
ರಸ್ತೆಯ ಪಕ್ಕದಲ್ಲಿ ಹಾವು ಉಡ ನುಂಗುತ್ತಿರುವುದನ್ನು ಗಮನಿಸಿದ್ದ ಬೈಕ್ ಸವಾರ ಮತ್ತಿಘಟ್ಟದ ಅನಂತಮೂರ್ತಿ ಭಟ್ಟ ಈ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.