ADVERTISEMENT

ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ಗೆ ‘ಕಿಸಾನ್‌ ರತ್ನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 13:36 IST
Last Updated 22 ಫೆಬ್ರುವರಿ 2022, 13:36 IST
ದೆಹಲಿಯಲ್ಲಿ ಕಿಸಾನ್ ವಿಜಯೋತ್ಸವ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಳಂದದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರಿಗೆ‌ ನಿವೃತ್ತ ನ್ಯಾಯಮೂರ್ತಿ ಕೊಳಸೆ ಪಾಟೀಲ್ ಅವರು  'ಕಿಸಾನ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.
ದೆಹಲಿಯಲ್ಲಿ ಕಿಸಾನ್ ವಿಜಯೋತ್ಸವ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಳಂದದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರಿಗೆ‌ ನಿವೃತ್ತ ನ್ಯಾಯಮೂರ್ತಿ ಕೊಳಸೆ ಪಾಟೀಲ್ ಅವರು 'ಕಿಸಾನ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.   

ನವದೆಹಲಿ: ಕರ್ನಾಟಕದ ಆಳಂದ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ್‌ ಅವರಿಗೆ ಮಹಾರಾಷ್ಟ್ರದ ಕಿಸಾನ್‌ ವಿಜಯೋತ್ಸವ ಸಮಿತಿಯ ‘ಕಿಸಾನ್‌ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಲ್ಲಿನ ‘ಕಾನ್ಸ್‌ಟಿಟ್ಯೂಷನ್ ಕ್ಲಬ್‌’ ಸಭಾಂಗಣದಲ್ಲಿ ಸಮಿತಿಯು ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿ.ಆರ್‌. ಪಾಟೀಲ ಅವರೊಂದಿಗೆ ರೈತಪರ ಮುಖಂಡರಾದ ರಾಕೇಶ್‌ ಟಿಕಾಯತ್‌, ಯೋಗೇಂದ್ರ ಯಾದವ್‌, ಅಶೋಕ್‌ ದಾಮ್ಲೆ, ಡಾ.ದರ್ಶನ್‌ ಪಾಲ್‌, ಹನನ್ ಮುಲ್ಲಾ, ವಿನಾಯಕರಾವ್‌ ಮುಲ್ಲಾ ಮತ್ತಿತರರಿಗೆ ನಿವೃತ್ತ ನ್ಯಾಯಮೂರ್ತಿ ಕೊಳಸೆ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಸತತ ಒಂದು ವರ್ಷದವರೆಗೆ ನಡೆಸಲಾದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮುಖಂಡರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.