ADVERTISEMENT

ಕೊಡಗು ಪ್ರವಾಹ: 15 ಕುಟುಂಬಗಳಿಗೆ ಶಾಶ್ವತ ನೆಲೆ

ಹುಮ್ಯಾನಿಟೇರಿಯನ್‌ ರಿಲೀಫ್‌ ಸೊಸೈಟಿ, ಜಮಾತ್‌ ಇಸ್ಲಾಮೀ ಹಿಂದ್‌ನಿಂದ ನೆರವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:36 IST
Last Updated 5 ನವೆಂಬರ್ 2019, 19:36 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನ್ಯಾಯಾಧೀಶೆ ನೂರುನ್ನಿಸಾ ಅವರಿಂದ ಸಂತ್ರಸ್ತ ಅಶ್ರಫ್‌ ಪರವಾಗಿ ಕೊಡಗು ಜಿಲ್ಲಾ ಜಾನಪದ ಪರಿಷತ್‌ ಪ್ರಧಾನ ಕಾರ್ಯದರ್ಶಿ ಮುನೀರ್‌ ಅಹ್ಮದ್‌, ನೂತನ ಮನೆಯ ಕೀ ಸ್ವೀಕರಿಸಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನ್ಯಾಯಾಧೀಶೆ ನೂರುನ್ನಿಸಾ ಅವರಿಂದ ಸಂತ್ರಸ್ತ ಅಶ್ರಫ್‌ ಪರವಾಗಿ ಕೊಡಗು ಜಿಲ್ಲಾ ಜಾನಪದ ಪರಿಷತ್‌ ಪ್ರಧಾನ ಕಾರ್ಯದರ್ಶಿ ಮುನೀರ್‌ ಅಹ್ಮದ್‌, ನೂತನ ಮನೆಯ ಕೀ ಸ್ವೀಕರಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್‌ನಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಭೂಕುಸಿತದಿಂದ ನೆಲೆ ಕಳೆದುಕೊಂಡಿದ್ದ 15 ಕುಟುಂಬಗಳಿಗೆ ಹುಮ್ಯಾನಿಟೇರಿಯನ್‌ ರಿಲೀಫ್‌ ಸೊಸೈಟಿ ಹಾಗೂ ಜಮಾತ್‌ ಇಸ್ಲಾಮೀ ಹಿಂದ್ ವತಿಯಿಂದ ನಿರ್ಮಿಸಿದ್ದ 15 ಮನೆಗಳನ್ನು ಮಂಗಳವಾರ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.

ಮಡಿಕೇರಿಯ ತ್ಯಾಗರಾಜ ಕಾಲೊನಿಯ ಕಾರುಣ್ಯ ಮೊಹಲ್ಲಾದಲ್ಲಿ 8 ಮನೆ, ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ 7 ಮನೆ ನಿರ್ಮಿಸಲಾಗಿದೆ. ಒಂದು ಮಲಗುವ ಕೋಣೆ, ಅಡುಗೆ ಕೋಣೆ, ಹಾಲ್‌ ಸೌಲಭ್ಯವಿರುವ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. 15 ಮನೆಗಳಿಗೆ ₹ 36 ಲಕ್ಷ ವೆಚ್ಚ ಮಾಡಲಾಗಿದೆ. ಶಾಶ್ವತ ನೆಲೆ ಸಿಕ್ಕಿದ್ದಕ್ಕೆ ಸಂತ್ರಸ್ತರು ಸಂತಸ ವ್ಯಕ್ತಪಡಿಸಿದರು.

ಇಸ್ಲಾಮೀ ಹಿಂದ್‌ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಮಾತನಾಡಿ, ‘ಸೊಸೈಟಿಯಿಂದ ಈ ವರ್ಷವೂ ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಂತ್ರಸ್ತರಾದ ಕುಟುಂಬಕ್ಕೆ ಶೆಡ್‌ ನಿರ್ಮಿಸಿಕೊಡಲಾಗಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.