ADVERTISEMENT

ಬಳ್ಳಾರಿ ಸೋಲು; ಕೊಪ್ಪಳಕ್ಕೆ ಶ್ರೀರಾಮುಲು

ಮಹಾ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರಿ ಅಂತರದಿಂದ ಸೋಲು ಕಂಡ ಬಳಿಕ ಆ ಚುನಾವಣೆ ಉಸ್ತುವಾರಿಯಾಗಿದ್ದ ಬಿ. ಶ್ರೀರಾಮುಲು ಅವರಿಗೆ ಕೊಕ್ ನೀಡಿರುವ ಬಿಜೆಪಿ, ಈ ಕ್ಷೇತ್ರದ ಹೊಣೆಯನ್ನು ಜಗದೀಶ ಶೆಟ್ಟರ್‌ಗೆ ವರ್ಗಾಯಿಸಿದೆ.

ಶಿವಮೊಗ್ಗ ಉಪ ಚುನಾವಣೆಯ ಜವಾಬ್ದಾರಿ ನಿರ್ವಹಿಸಿದ್ದ ಕೆ.ಎಸ್. ಈಶ್ವರಪ್ಪ ಅವರಿಗೆ ಮೈಸೂರು–ಕೊಡಗು ಹೊಣೆ ನೀಡಿದ್ದು, ಶಿವಮೊಗ್ಗದ ಉಸ್ತುವಾರಿಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿಗೆ ನೀಡಲಾಗಿದೆ. ಅದೇ ರೀತಿ ಕಾಗೇರಿ ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯ ಹೊಣೆಯನ್ನು ಲಿಂಗರಾಜ ಪಾಟೀಲರಿಗೆ ವಹಿಸಲಾಗಿದೆ.

ಮಂಡ್ಯ ಉಪಚುನಾವಣೆ ನೇತೃತ್ವ ವಹಿಸಿದ್ದ ಆರ್. ಅಶೋಕ್‌ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಚಾಲಕರನ್ನಾಗಿ ನಿಯುಕ್ತಿ ಮಾಡಲಾಗಿದೆ. ಸುಬ್ಬನರಸಿಂಹ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ.

ADVERTISEMENT

ಪ್ರಭಾರಿಗಳು, ಸಂಚಾಲ ಕರು:ಮೈಸೂರು: ಈಶ್ವರಪ್ಪ, ಎನ್.ವಿ.ಫಣೀಶ್‌, ಚಾಮರಾಜನಗರ: ಎಲ್‌.ನಾಗೇಂದ್ರ, ಬಾಲಸುಬ್ರಹ್ಮಣ್ಯ, ಮಂಡ್ಯ: ಅಶ್ವತ್ಥನಾರಾಯಣ, ಮಧುಚಂದನ್‌, ಹಾಸನ: ಸಿ.ಟಿ.ರವಿ, ರೇಣುಕುಮಾರ್‌, ದಕ್ಷಿಣ ಕನ್ನಡ: ವಿ.ಸುನೀಲ್ ಕುಮಾರ್, ಗೋಪಾಲಕೃಷ್ಣ ಹೇರಳೆ.

ಉಡುಪಿ–ಚಿಕ್ಕಮಗಳೂರು: ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ, ಹರತಾಳು ಹಾಲಪ್ಪ, ಉತ್ತರ ಕನ್ನಡ: ಲಿಂಗರಾಜ್ ಪಾಟೀಲ, ವಿನೋದ್‌ ಪ್ರಭು, ಹಾವೇರಿ: ಬಸವರಾಜ ಬೊಮ್ಮಾಯಿ, ಸಿದ್ಧರಾಜ ಕಲಕೋಟೆ, ಧಾರವಾಡ: ಗೋವಿಂದ ಕಾರಜೋಳ, ಡಾ. ಮಾ.ನಾಗರಾಜ್‌.

ಬೆಳಗಾವಿ: ಮಹಾಂತೇಶ ಕವಟಗಿಮಠ, ಈರಣ್ಣ ಕಡಾಡಿ, ಚಿಕ್ಕೋಡಿ: ಸಂಜಯ್‌ ಪಾಟೀಲ, ಶಶಿಕಾಂತ ನಾಯಕ್‌, ಬಾಗಲಕೋಟೆ: ಸಿ.ಸಿ.ಪಾಟೀಲ, ವೀರಣ್ಣ ಚರಂತಿಮಠ, ವಿಜಯಪುರ: ಲಕ್ಷ್ಮಣ ಸವದಿ, ಅರುಣ್‌ ಶಹಾಪುರ, ಬೀದರ್‌: ಅಮರನಾಥ ಪಾಟೀಲ, ಸುಭಾಷ್‌ ಕಲ್ಲೂರ.

ಕಲಬುರ್ಗಿ: ಎನ್‌.ರವಿಕುಮಾರ್, ಮಾಲೀಕಯ್ಯ ಗುತ್ತೇದಾರ, ರಾಯಚೂರು: ಹಾಲಪ್ಪ ಆಚಾರ್‌, ರಮಾನಂದ ಯಾದವ್‌, ಕೊಪ್ಪಳ: ಬಿ.ಶ್ರೀರಾಮುಲು, ಅಪ್ಪಣ್ಣ ಪದಕಿ, ಬಳ್ಳಾರಿ: ಜಗದೀಶ ಶೆಟ್ಟರ್‌, ಮೃತ್ಯುಂಜಯ ಜಿನಗಾ, ದಾವಣಗೆರೆ: ಆಯನೂರು ಮಂಜುನಾಥ, ಜೀವನಮೂರ್ತಿ, ಚಿತ್ರದುರ್ಗ: ವೈ.ಎ.ನಾರಾಯಣಸ್ವಾಮಿ, ಟಿ.ಜಿ.ನರೇಂದ್ರನಾಥ್‌, ತುಮಕೂರು: ಅರವಿಂದ ಲಿಂಬಾವಳಿ, ಬೆಟ್ಟಸ್ವಾಮಿ.

ಬೆಂಗಳೂರು ಗ್ರಾಮಾಂತರ: ಅಶ್ವತ್ಥ ನಾರಾಯಣ, ತುಳಸಿ ಮುನಿರಾಜಗೌಡ, ಚಿಕ್ಕಬಳ್ಳಾಪುರ: ವಿ.ಸೋಮಣ್ಣ, ಎಸ್‌.ಆರ್‌.ವಿಶ್ವನಾಥ್‌, ಕೋಲಾರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವೈ.ಸಂಪಂಗಿ, ಬೆಂಗಳೂರು ಕೇಂದ್ರ: ಡಾ. ಅಶ್ಥತ್ಥನಾರಾಯಣ, ಸಚ್ಚಿದಾನಂದಮೂರ್ತಿ, ಬೆಂಗಳೂರು ಉತ್ತರ: ಬಿ.ಎಚ್‌.ಕೃಷ್ಣಾ ರೆಡ್ಡಿ, ಎಸ್.ಮುನಿರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.