ADVERTISEMENT

ಒಳನಾಡು ಮೀನುಗಾರಿಕೆ ಹಕ್ಕು ಮೀನುಗಾರರಿಗೆ

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:43 IST
Last Updated 23 ಫೆಬ್ರುವರಿ 2020, 10:43 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಒಳನಾಡು ಮೀನುಗಾರಿಕೆ ವ್ಯಾಪ್ತಿಯ ಕೆರೆ, ನದಿ, ಸರೋವರಗಳ ನಿರ್ವಹಣೆಯನ್ನು ಸ್ಥಳೀಯ ಮೀನುಗಾರರಿಗೆ ವಹಿಸುವ ಚಿಂತನೆ ಇದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶನಿವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೀನುಗಾರರಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯನ್ನು ಮೀನುಗಾರಿಕಾ ಸಂಘಗಳು ನಿರ್ವಹಿಸುತ್ತಿವೆ. ಸಂಘದ ಹೆಸರಿನಲ್ಲಿ ಬಲಾಢ್ಯರು ಲಾಭ ಪಡೆಯುತ್ತಿರುವ ದೂರುಗಳು ಕೇಳಿಬಂದ ಕಾರಣದಿಂದ ಸ್ಥಳೀಯ ಮೀನುಗಾರರಿಗೆ ನಿರ್ವಹಣೆಯ ಜವಾಬ್ದಾರಿ ನೀಡಲು
ನಿರ್ಧರಿಸಲಾಗಿದೆ’ ಎಂದರು.

ಒಳನಾಡು ಮೀನುಗಾರಿಕೆ ಅಭಿವೃದ್ಧಿಯಾಗಬೇಕು ಹಾಗೂ ಸ್ಥಳೀಯ ಮೀನುಗಾರರಿಗೆ ಅದರ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು ಎಂದು ಕೋಟ ತಿಳಿಸಿದರು.

ADVERTISEMENT

ಸಮಗ್ರ ಮೀನುಗಾರಿಕಾ ನೀತಿ ಶೀಘ್ರ: ಕಡಲ ಮೀನುಗಾರಿಕೆಯೂ ಸಮಸ್ಯೆಗಳನ್ನು ಎದುರಿಸು
ತ್ತಿದೆ. ರಾಜ್ಯದ ಮೀನುಗಾರರು ಬೇರೆ ರಾಜ್ಯಗಳ ಗಡಿ ಪ್ರವೇಶಿಸಿದಾಗ ಪ್ರಕರಣ ದಾಖಲಿಸಿ ದಂಡ ಹಾಕಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಲಾಗುವುದು. ಈ ಸಂಬಂಧ ಅಧಿಕಾರಿಗಳು, ತಜ್ಞರು ಅಧ್ಯಯನ ನಡೆಸಿದ್ದಾರೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.