ADVERTISEMENT

ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:41 IST
Last Updated 8 ನವೆಂಬರ್ 2025, 15:41 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಂಗಳೂರು: ‘ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ನ ತೀರ್ಮಾನವೇ ಅಂತಿಮ. ಅವರು ಏನು ಮಾಡುತ್ತಾರೆಂದು ನೋಡೋಣ’‌ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್‌ನ ಸಾರಥ್ಯ ವಹಿಸುವಂತೆ ಆಪ್ತರು ಸಲಹೆ ನೀಡುತ್ತಿರುವ ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲ ಈಗ ಏನೂ ಆಗಲ್ಲ’ ಎಂದರು.

ADVERTISEMENT

‘ಯಾವ ಕ್ರಾಂತಿಯೂ ಇಲ್ಲ. ಏನೂ ಇಲ್ಲ' ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕ್ರಾಂತಿ ಇಲ್ಲ ಎಂದು ಅವರೇ ಹೇಳಿದ್ದಾರಲ್ಲ. ರಾಮಲಿಂಗಾರೆಡ್ಡಿಯವರೂ ಹೇಳಿದ್ದಾರೆ. ಸುರೇಶ್ ಕೂಡ ಕ್ರಾಂತಿ ಇಲ್ಲ ಎನ್ನುತ್ತಿದ್ದಾರೆ. ಎಲ್ಲರೂ ಇಲ್ಲ ಅಂದಮೇಲೆ ಇನ್ನೇನಿದೆ? ನಾನು ಅದನ್ನೇ ಹೇಳುತ್ತಿದ್ದೇನೆ’ ಎಂದರು.

ಆಪ್ತರ ಜೊತೆ ಮತ್ತೆ ಔತಣಕೂಟಕ್ಕೆ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಯಾವ ಯೋಚನೆಯೂ ಇಲ್ಲ. ನಾವು ಸುಮ್ಮನಿದ್ದರೂ ಆ ವಿಚಾರ ನಮ್ಮನ್ನೇ ಸುತ್ತು ಹಾಕುತ್ತಿದೆ’ ಎಂದರು‌.

ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಶಿವಕುಮಾರ್ ಬಣ ಆಗ್ರಹಿಸಿದೆ ಎಂಬ ಮಾತು ಇದೆಯಲ್ಲ ಎಂಬ ಪ್ರಶ್ನೆಗೆ, ‘ಆ ಕುರಿತು ಶಿವಕುಮಾರ್ ಅವರನ್ನೇ ನೀವು ಕೇಳಬೇಕು’ ಎಂದು ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.