ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ ತೀರ್ಪು| ಕೇಂದ್ರದಿಂದ ಶೀಘ್ರವೇ ಅಧಿಸೂಚನೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 6:31 IST
Last Updated 30 ಸೆಪ್ಟೆಂಬರ್ 2022, 6:31 IST
   

ಬಾಗಲಕೋಟೆ: ಕೃಷ್ಣಾ ನದಿ ನೀರು ಹಂಚಿಕೆ ತೀರ್ಪು ಅನ್ನು ಕೇಂದ್ರ ಶೀಘ್ರ ಅಧಿಸೂಚನೆ ಹೊರಡಿಸಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

ಶುಕ್ರವಾರ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ತೀರ್ಪು ಆಕ್ಷೇಪಣೆ ವಿಚಾರಣೆಗೆ ಸುಪ್ರೀಂ ಕೋರ್ಟ್ ನಲ್ಲಿ ಶೀಘ್ರ ವಿಶೇಷ ಬೆಂಚ್ ಸ್ಥಾಪನೆಯಾಗಲಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ನ್ಯಾಯಾದೀಶರು ಹಿಂದೆ ಸರಿದಿದ್ದು, ಹೊಸ ನ್ಯಾಯಾಧೀಶರ ನೇಮಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ತಿಂಗಳು ವಿಚಾರಣೆ ಆರಂಭವಾಗಲಿದೆ ಎಂದರು

ಯುಕೆಪಿ ಮೂರನೇ‌ ಹಂತದ ಕಾಮಗಾರಿಗೆ ಈಗಾಗಲೇ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಆಲಮಟ್ಟಿಗೆ ಸ್ಥಳಾಂತರ ಕಾರ್ಯ ಜನವರಿಯೊಳಗೆ ಆಗಲಿದೆ ಎಂದು ಹೇಳಿದರು.

ಪಿಎಫ್ಐ ಯಾಕೆ ನಿಷೇಧ ಮಾಡುತ್ತಿಲ್ಲ ಎಂದು‌ ವಿಧಾನಸಭೆಯಲ್ಲಿ ಕಾಂಗ್ರೆಸ್ ನವರು ಪ್ರಶ್ನಿಸಿದ್ದರು. ಈಗ ಪ್ರಶ್ನೆ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಹಾಗೂ ಬಜರಂಗ ದಳವನ್ನು ಪಿಎಫ್ ಐ ಗೆ ಹೋಲಿಸುವುದು ಮೂರ್ಖತನ ಆಗುತ್ತದೆ ಎಂದರು.

ಸಚಿವ‌ ಸಂಪುಟ ವಿಸ್ತರಣೆ‌ಯನ್ನು ಬಗ್ಗೆ ಚರ್ಚಿಸಲು‌ ದೆಹಲಿಗೆ ಹೋಗುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.