ADVERTISEMENT

ಕೆಎಸ್‌ಡಿಎಲ್‌: ಜನವರಿ ತಿಂಗಳೊಂದರಲ್ಲೇ 4,894 ಟನ್ ಸಾಬೂನು ಉತ್ಪಾದನೆ ದಾಖಲೆ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 0:20 IST
Last Updated 4 ಫೆಬ್ರುವರಿ 2026, 0:20 IST
<div class="paragraphs"><p>ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಯಶವಂತಪುರ ಘಟಕದಲ್ಲಿ ತಯಾರಿಸಲಾದ ‘ಮೈಸೂರ್‌ ಸ್ಯಾಂಡಲ್‌ ಗೋಲ್ಡ್‌’ ಸಾಬೂನುಗಳನ್ನು ಪರಿಶೀಲಿಸಿದ ಕಾರ್ಮಿಕರು –ಪ್ರಜಾವಾಣಿ ಚಿತ್ರ</p></div>

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಯಶವಂತಪುರ ಘಟಕದಲ್ಲಿ ತಯಾರಿಸಲಾದ ‘ಮೈಸೂರ್‌ ಸ್ಯಾಂಡಲ್‌ ಗೋಲ್ಡ್‌’ ಸಾಬೂನುಗಳನ್ನು ಪರಿಶೀಲಿಸಿದ ಕಾರ್ಮಿಕರು –ಪ್ರಜಾವಾಣಿ ಚಿತ್ರ

   

ಬೆಂಗಳೂರು: ಜನವರಿ ತಿಂಗಳೊಂದರಲ್ಲೇ 4,894 ಟನ್‌ ಸಾಬೂನು ಮತ್ತು ಮಾರ್ಜಕಗಳನ್ನು ಉತ್ಪಾದಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು (ಕೆಎಸ್‌ಡಿಎಲ್‌) ತನ್ನ ಹಿಂದಿನ ದಾಖಲೆಗಳನ್ನು ಮುರಿದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಮಂಗಳವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಕೆಎಸ್‌ಡಿಎಲ್‌ 2023ರ ನವೆಂಬರ್‌ನಲ್ಲಿ 4,144 ಟನ್, 2025ರ ಮಾರ್ಚ್‌ನಲ್ಲಿ 4,486 ಟನ್, 2025ರ ಡಿಸೆಂಬರ್‌ನಲ್ಲಿ 4,735 ಟನ್ ಸಾಬೂನು ಮತ್ತು ಮಾರ್ಜಕ ಉತ್ಪಾದಿಸಿದ್ದು ಈವರೆಗಿನ ಗರಿಷ್ಠವಾಗಿತ್ತು. ಈ ವರ್ಷದ ಜನವರಿಯಲ್ಲಿ 3,798 ಟನ್‌ ಸಾಬೂನು, 941 ಟನ್‌ ಮಾರ್ಜಕ ಮತ್ತು 155 ಟನ್‌ಗಳಷ್ಟು ಪ್ರಸಾದನ ಸಾಮಗ್ರಿಗಳನ್ನು ಉತ್ಪಾದಿಸಿದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಉತ್ತರಭಾರತ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಹಾಗೂ ಬ್ರ್ಯಾಂಡಿಂಗ್‌ ಬಲವರ್ಧನೆಗೆ ಕ್ರಮ ತೆಗೆದುಕೊಂಡ ಪರಿಣಾಮ ಕೆಎಸ್‌ಡಿಎಲ್‌ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಲೇ ಉತ್ಪಾದನೆ ಏರಿಕೆಯಾಗುತ್ತಿದೆ’ ಎಂದಿದ್ದಾರೆ.

ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್‌.ನಾಡಗೌಡ, ‘ನಮ್ಮ ನಿಗಮದ 45ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗುವುದು. 2030ರ ವೇಳೆಗೆ ವಾರ್ಷಿಕ ವಹಿವಾಟನ್ನು ₹5,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಪಿ.ಕೆ.ಎಂ., ‘ಹಳೆಯ ಯಂತ್ರಗಳನ್ನೇ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.