ADVERTISEMENT

ಕ್ಷೀರ ಭಾಗ್ಯ| ಟೆಟ್ರಾ ಪ್ಯಾಕ್‌ನಲ್ಲಿ ಮಕ್ಕಳಿಗೆ ಹಾಲು ವಿತರಿಸಲು ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 19:51 IST
Last Updated 28 ನವೆಂಬರ್ 2022, 19:51 IST
   

ಬೆಂಗಳೂರು: ಕ್ಷೀರ ಭಾಗ್ಯ ಯೋಜನೆ ಅಡಿ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್‌ನಲ್ಲಿ ಹಾಲು ವಿತರಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಎಂಎಫ್‌ ಸಲ್ಲಿಸಿದೆ.

ಟೆಟ್ರಾ ಪ್ಯಾಕ್‌ನಲ್ಲಿ ಹಾಲು 90 ದಿನಗಳಿಂದ 6 ತಿಂಗಳವರೆಗೆ ಸುರಕ್ಷಿತವಾಗಿರಲಿದೆ ಎಂದು ತಿಳಿಸಿದೆ.

‘ಪ್ರಾಯೋಗಿಕವಾಗಿ ಮೊದಲು 4–5 ಜಿಲ್ಲೆಗಳಲ್ಲಿ ಆರಂಭಿಸಬೇಕು. ಈ ಜಿಲ್ಲೆಗಳಲ್ಲಿ ದೊರೆಯುವ ಪ್ರತಿಕ್ರಿಯೆ ಆಧರಿಸಿ ರಾಜ್ಯದಾದ್ಯಂತ ವಿಸ್ತರಿಸಬಹುದು. ಟೆಟ್ರಾ ಪ್ಯಾಕ್‌ನಲ್ಲಿ ಹಾಲು ವಿತರಿಸುವುದರಿಂದ ಹೆಚ್ಚುವರಿ ಕಾರ್ಯಭಾರ ಕಡಿಮೆಯಾಗುತ್ತದೆ. ಮಕ್ಕಳು ಇಚ್ಛಿಸಿದರೆ ಸುಲಭವಾಗಿ ಮನೆಗೆ ಕೊಂಡೊಯ್ದು ಕುಡಿಯಬಹುದು’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.