ADVERTISEMENT

ಕೆಎಸ್‍ಆರ್‌ಟಿಸಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:31 IST
Last Updated 28 ಏಪ್ರಿಲ್ 2019, 20:31 IST
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ (ಎಡದಿಂದ ಎರಡನೇಯವರು) ಅವರಿಗೆ ಹುಡ್ಕೋ ಅಧ್ಯಕ್ಷ ಡಾ.ಎಂ.ರವಿಕಾಂತ್ (ಎಡದಿಂದ ನಾಲ್ಕನೇಯವರು) ‘ರಾಷ್ಟ್ರೀಯ ಹುಡ್ಕೋ ಉತ್ತಮ ಸೇವಾ ಪ್ರಶಸ್ತಿ’ ಪ್ರದಾನ ಮಾಡಿದರು.

ಬೆಂಗಳೂರು: ಸಾರಿಗೆ ಸೇವೆಯಲ್ಲಿ ನೀಡಿದ ಅತ್ಯುತ್ತಮ ಸೇವೆಗಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎರಡು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ನೀಡಿದ ಉತ್ತಮ ನಗರ ಸಾರಿಗೆ ಸೇವೆಗೆ ‘ನಗರ ಸಾರಿಗೆ’ ವಿಭಾಗದಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ರಾಷ್ಟ್ರೀಯ ಹುಡ್ಕೋ ಉತ್ತಮ ಸೇವಾ ಪ್ರಶಸ್ತಿ- 2019 ಮತ್ತು ₹ 1 ಲಕ್ಷ ನಗದು ಪುರಸ್ಕಾರಕ್ಕೆ ನಿಗಮ ಪಾತ್ರವಾಗಿದೆ.

ದೇಶದ ರಸ್ತೆ ಲಾಜಿಸ್ಟಿಕ್ಸ್‌ನಲ್ಲಿ (ಸರ್ಕಾರಿ ಮತ್ತು ಖಾಸಗಿ ಎರಡೂ ಸೇರಿ ಅತ್ಯುತ್ತಮ ಪ್ರಯಾಣಿಕ ಸಾರಿಗೆ ಸಂಸ್ಥೆ ವಿಭಾಗ) ‘ಇಂಡಿಯನ್ ಆಯಿಲ್ ಟೈಮ್ಸ್ ನೌ ನೆಟ್‍ವರ್ಕ್ ಎಕ್ಸಲೆನ್ಸ್ ಪ್ರಶಸ್ತಿ-2019’ಯೂ ಸಾರಿಗೆ ನಿಗಮಕ್ಕೆ ಬಂದಿದೆ.

ADVERTISEMENT

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಪ್ರಶಸ್ತಿ ಸ್ವೀಕರಿಸಿದರು ಎಂದು ನಿಗಮದಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.