ADVERTISEMENT

ಕೆಎಸ್‌ಆರ್‌ಟಿಸಿ: ಸಂಭವನೀಯ ಆಯ್ಕೆಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 19:59 IST
Last Updated 20 ಫೆಬ್ರುವರಿ 2019, 19:59 IST

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಮೇಲ್ವಿಚಾರಕೇತರ (ದರ್ಜೆ –3) ವಿವಿಧ ವೃಂದಗಳ ವಿವಿಧ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿಯನ್ನು ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಲೆಕ್ಕಿಗ, ಅಂಕಿ-ಅಂಶ ಸಹಾಯಕ, ಸಹಾಯಕ ಉಗ್ರಾಣ ರಕ್ಷಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ಸಂಭವನೀಯ ಆಯ್ಕೆಪಟ್ಟಿ ಹಾಗೂ ಹುದ್ದೆವಾರು ಕಟ್-ಆಫ್ ಪಟ್ಟಿಗಳನ್ನು ವೆಬ್‌ಸೈಟ್‌:www.ksrtcjobs.comನಲ್ಲಿ ಪ್ರಕಟಿಸಲಾಗಿದೆ. ಕುಶಲಕರ್ಮಿ ಹುದ್ದೆಯ ಎಲ್ಲಾ ವೃತ್ತಿಗಳಿಗೆ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

ಈಗ ಪ್ರಕಟಿಸಲಾದ ಆಯ್ಕೆಪಟ್ಟಿಗಳಿಗೆ ಏನಾದರೂ ಆಕ್ಷೇಪಗಳಿದ್ದಲ್ಲಿ ಆಯ್ಕೆಪಟ್ಟಿ ಪ್ರಕಟಿಸಿದ ಫೆ. 27ರ ಒಳಗಾಗಿ ಪೂರಕ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು(ನೇಮಕ), ಕರಾರಸಾ ನಿಗಮ, ಕೇಂದ್ರ ಕಚೇರಿ, ಬೆಂಗಳೂರು ಅವರ ಇ-ಮೇಲ್ ವಿಳಾಸ:cpmrct@ksrtc.orgಗೆ ಮೇಲ್ ಮುಖಾಂತರ ಮಾತ್ರ ಸಲ್ಲಿಸಬಹುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.