ADVERTISEMENT

ಆಂಧ್ರಪ್ರದೇಶಕ್ಕೆ ಸಾರಿಗೆ ಬಸ್‌ ಕಾರ್ಯಾಚರಣೆಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 17:25 IST
Last Updated 2 ಫೆಬ್ರುವರಿ 2023, 17:25 IST
‌ದ್ವಾರಕಾ ತಿರುಮಲ ರಾವ್ ಮತ್ತು ವಿ.ಅನ್ಬುಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು
‌ದ್ವಾರಕಾ ತಿರುಮಲ ರಾವ್ ಮತ್ತು ವಿ.ಅನ್ಬುಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು   

ಬೆಂಗಳೂರು: ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವೆ ಬಸ್‌ಗಳ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಮತ್ತು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಡುವೆ ಮತ್ತೊಂದು ಒಪ್ಪಂದ ಏರ್ಪಟ್ಟಿದೆ.

‘ಎರಡೂ ರಾಜ್ಯಗಳ ನಡುವೆ ಸದ್ಯ 8 ಅಂತರರಾಜ್ಯ ಒಪ್ಪಂದಗಳು ನಡೆದಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ವಿಜಯವಾಡದಲ್ಲಿ 9ನೇ ಒಪ್ಪಂದವನ್ನು ಗುರುವಾರ ಮಾಡಿಕೊಳ್ಳಲಾಯಿತು’ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೆಎಸ್‌ಆರ್‌ಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ದ್ವಾರಕಾ ತಿರುಮಲ ರಾವ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.