ADVERTISEMENT

ತೆರಿಗೆ ವಿನಾಯಿತಿಗೆ ಕೆಎಸ್‌ಆರ್‌ಟಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:09 IST
Last Updated 25 ಜನವರಿ 2021, 19:09 IST
   

ಬೆಂಗಳೂರು: ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ಗೆ ಮಾರಾಟ ತೆರಿಗೆ (ಸೇಲ್ಸ್ ಟ್ಯಾಕ್ಸ್) ವಿನಾಯಿತಿ ಕೋರಿ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಮನವಿ ಸಲ್ಲಿಸಿದೆ.

ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗದ ಕಾರಣ ಮೊದಲೇ ಸಂಸ್ಥೆಗಳು ನಷ್ಟದಲ್ಲಿವೆ. 1.30 ಲಕ್ಷ ನೌಕರರಿದ್ದು, ವೇತನ ನೀಡಲಾಗದ ಸ್ಥಿತಿ ಇದೆ. ಕಳೆದ ತಿಂಗಳ ಅರ್ಧದಷ್ಟು ವೇತನ ನೀಡಲಾಗಿದೆ. ಈ ನಡುವೆ ಡೀಸೆಲ್ ದರ ಏರಿಕೆಯಾಗಿರುವ ಕಾರಣ ನಾಲ್ಕೂ ನಿಗಮಗಳಿಗೆ ಪ್ರತಿದಿನ ₹26 ಲಕ್ಷ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಿ ತೆರಿಗೆ ವಿನಾಯಿತಿ ನೀಡುವಂತೆ ನಾಲ್ಕೂ ನಿಗಮಗಳ ಪರವಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ನಾಲ್ಕೂ ನಿಗಮಗಳಿಂದ ಒಟ್ಟು 25 ಸಾವಿರಕ್ಕೂ ಹೆಚ್ಚು ಬಸ್‌ಗಳಿದ್ದು, ದಿನಕ್ಕೆ 1,600ಕ್ಕೂ ಹೆಚ್ಚು ಕಿಲೋ ಲೀಟರ್ ಡೀಸೆಲ್ ಅಗತ್ಯವಿದೆ. ಡೀಸೆಲ್ ದರ ಏರಿಕೆ ದೊಡ್ಡ ಹೊರೆಯಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.