ಬೆಂಗಳೂರು: ಇಲ್ಲಿ ಯಾರಿಗೂ ಯಾರು ಬೆಗ್ಗರ್ಸ್ ಅಲ್ಲ. ಜೆಡಿಎಸ್ ಪಕ್ಷ ಬೆಗ್ಗರ್ಸ್ ಅಲ್ಲ. ಕಾಂಗ್ರೆಸ್ ಪಕ್ಷ ಕೂಡ ಬೆಗ್ಗರ್ಸ್ ಅಲ್ಲ. ನಮ್ಮದು ಮೈತ್ರಿ ಸರ್ಕಾರ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.
ಸೀಟು ಹಂಚಿಕೆ ಸಂಬಂಧ ನಮ್ಮಲ್ಲಿ ಇನ್ನು ಚರ್ಚೆಯಾಗಿಲ್ಲ, ಎರಡುಅಥವಾ ಮೂರು ಸೀಟ್ ಕೊಡ್ತಾರೆ ಎಂದು ಕುಮಾರಸ್ವಾಮಿಗೆ ಯಾರೋ ಹೇಳಿದ್ದಾರೆ ಅದಕ್ಕೆ ಅವರು ಆ ಹೇಳಿಕೆ ನೀಡಿರಬಹುದು. ಸ್ಥಾನ ಹಂಚಿಕೆ ಕುರಿತುಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಸುಮಲತಾ ಅಂಬರೀಷ್ ಸಿದ್ದರಾಮಯ್ಯ ಭೇಟಿ ವಿಚಾರ:ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರು ಸಿದ್ದರಾಮಯ್ಯ ಜೊತೆಯಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.
ಸ್ಕ್ರೀನಿಂಗ್ ಕಮಿಟಿ: ಎಲ್ಲ ರಾಜ್ಯಗಳಲ್ಲೂ ಒಂದು ಸ್ಕ್ರೀನಿಂಗ್ ಕಮಿಟಿ ಮಾಡಲಾಗಿದೆ. ಇದಕ್ಕೆ ಪ್ರಧಾನ ಕಾರ್ಯದರ್ಶಿ, ಸಿಎಲ್ ಪಿ ನಾಯಕರು, ಕೆಪಿಸಿಸಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಉದ್ದೇಶಪೂರ್ವಕವಾಗಿ ನನ್ನ ಬಿಟ್ಟಿದ್ದಾರೆಎಂಬುದು ಸುಳ್ಳು, ಪಕ್ಷದ ತೀರ್ಮಾನದಂತೆ ನಡೆಯುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.