ADVERTISEMENT

ಎಪಿಎಂಸಿ ಕಾಯ್ದೆಗೆ ತರಾತುರಿ ತಿದ್ದುಪಡಿ: ಕುಮಾರಸ್ವಾಮಿ ವಿರೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2020, 9:18 IST
Last Updated 12 ಮೇ 2020, 9:18 IST
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಮಹಾರಾಷ್ಟ್ರ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾನೂನು ಜಾರಿಮಾಡಲು ಯತ್ನಿಸಿ ವಿಫಲವಾಗಿದೆ. ರಾಜ್ಯ ಸರ್ಕಾರವು ಈಕಾನೂನನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿರುವುದರಉದ್ದೇಶ ಏನು?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಜತೆ ಸೇರಿಜನವಿರೋಧಿ ಕೆಲಸಗಳಿಗೆ ಕೈ ಜೋಡಿಸೋಕೆ ನೀವು ಸಿಎಂ ಆಗಿಲ್ಲ ಯಡಿಯೂರಪ್ಪ’ಎಂದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆಯ ಮೂಲಕರೈತರ ಬುಡಕ್ಕೆ ಸಂಚಕಾರ ತರಲುಸರ್ಕಾರ ಮುಂದಾಗಿದೆ.ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು.ಸುಗ್ರೀವಾಜ್ಞೆ ಮೂಲಕ ಏಕೆ ಕಾನೂನು ಜಾರಿ ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿಗೂ ವಿರೋಧ

‘12 ಗಂಟೆ ಕೆಲಸ ಮಾಡಬೇಕೆಂಬಕಾಯ್ದೆ ತರಲು ಮುಂದಾಗಿದ್ದೀರಿ.ಇದಕ್ಕೆ ಹೆಚ್ಚು ಸಂಬಳ ಕೊಡ್ತೀರಾ? ಇಲ್ವಾ? ಹೆಚ್ಚು ಕೆಲಸ ಮಾಡಲು ಕಾರ್ಮಿಕರಿಗೆ ದೈಹಿಕ ಶಕ್ತಿ ಇದೆಯೇ? ಇದನ್ನು ಸರ್ಕಾರ ಅರಿತಿದೆಯೇ? ಯಾರನ್ನೋ ಕಾಪಾಡಲು ಇಂಥ ಕಾಯ್ದೆ ತರೋದು ಸರಿಯಲ್ಲ’ ಎಂದು ಹೇಳಿದರು.

‘ಮಧ್ಯ ಪ್ರದೇಶ, ಉತ್ತರ ಪ್ರದೇಶ ಮಾದರಿಯಲ್ಲಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವುದು ಸರಿಯಲ್ಲ.ಕೈಗಾರಿಕೆಗಳು ಉಳಿಯಬೇಕು. ಆದರೆ ಅದಕ್ಕಾಗಿ ಸಾರ್ವಜನಿಕ ಚರ್ಚೆಗೆ ಅವಕಾಶ ಕೊಡದೇ ತರಾತುರಿಯಲ್ಲಿಸುಗ್ರಿವಾಜ್ಞೆ ಜಾರಿ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರವನ್ನು ತೃಪ್ತಿ ಮಾಡಲು ಹೀಗೆ ವರ್ತಿಸುತ್ತಿದ್ದೀರಾ’ಎಂದು ಅನುಮಾನ ವ್ಯಕ್ತಪಡಿಸಿದರು.

‘ಕಾನೂನು ತರುವ ಉದ್ದೇಶ ನಿಮಗಿದ್ದರೆ ಕೂಡಲೇಅಧಿವೇಶನ ಕರೆಯಿರಿ. ಚರ್ಚೆ ಮಾಡೋಣ.ಚರ್ಚೆಯ ನಂತರ ಕಾಯ್ದೆ ಜಾರಿಗೆ ತರೋಣ.ಕಾಯ್ದೆಗೆ ಅಂಗಿಕಾರ ನೀಡದಂತೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇನೆ’ ಎಂದು ಆಗ್ರಹಿಸಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ಜನರು ಸ್ಪಂದಿಸಿದ್ದಾರೆ.ಪ್ರಾರಂಭಿಕ ಹಂತದಲ್ಲಿ ಸರ್ಕಾರ ಲಾಕ್‌ಡೌನ್ ಬಗ್ಗೆ ತೋರಿಸಿದ ವೇಗ ಹಂತ ಹಂತವಾಗಿ ಕಡಿಮೆಯಾಯ್ತು. ಸರ್ಕಾರ ನಡೆಸುವವರೇಲಾಕ್‌ಡೌನ್ ಸಡಿಲಿಕೆ ಮಾಡಿದರು.ಸಡಿಲಿಕೆಗೆಪೂರ್ವ ಸಿದ್ಧತೆ ಇರಲಿಲ್ಲ’ ಎಂದು ಟೀಕಿಸಿದರು.

‘ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿ. ಅದು ಕೇವಲಘೋಷಣೆಯಾಗಿಉಳಿಯಬಾರದು.ಪೂರ್ವ ಸಿದ್ಧತೆಗಳಿಲ್ಲದೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ‌‌.ಹೂ ಮಾರಾಟ ಮಾಡುವವರು, ವಿಶ್ವಕರ್ಮ, ರಸ್ತೆ ಕಾರ್ಮಿಕರು ಹೀಗೆ ವಿವಿಧ ವರ್ಗದ 50 ಲಕ್ಷ ಜನರು ಇರಬಹುದು.50 ಲಕ್ಷ ಕುಟುಂಬಕ್ಕೆ 5 ಸಾವಿರ ಕೊಟ್ಟರೆ ₹2.5 ಸಾವಿರ ಕೋಟಿ ಆಗುತ್ತೆ.ಕಟ್ಟಡ ಕಾರ್ಮಿಕರೇ 21 ಲಕ್ಷ ಜನರಿದ್ದಾರೆ.ಕಾರ್ಮಿಕ ಪರಿಹಾರ ನಿಧಿಯಲ್ಲೇ ಹಣ ಇದೆ’ ಎಂದರು.

‘ಮಂಡ್ಯದ ಮೈಶುಗರ್ ಕಾರ್ಖಾನೆಗೆ ಒಂದು ಇತಿಹಾಸ ಇದೆ. ಅರಸರ ಕಾಲದಲ್ಲಿ ಡ್ಯಾಂ ಕಟ್ಟಿದಾಗಲೇ ಮೈ ಶುಗರ್ ಕಾರ್ಖಾನೆ ಆರಂಭಿಸಲಾಯ್ತು.ಕಾರ್ಖಾನೆ ನಷ್ಟಕ್ಕೆ ಒಳಗಾಗಿರೋದು ಆಡಳಿತ ಮಂಡಳಿಯಿಂದ.ಡಿಸೆಂಬರ್ ತಿಂಗಳಲ್ಲಿ ಸಭೆ ನಡೆಸಿ ಖಾಸಗಿಯವರಿಗೆ ನೀಡಬೇಕು ಅಂತಾ ತೀರ್ಮಾನ ಮಾಡಿದ್ದಾರೆ.ಉತ್ತರ ಕರ್ನಾಟಕದಲ್ಲಿ ಪ್ರತಿ ವರ್ಷ ರೈತರು ಸಕ್ಕರೆ ಕಾರ್ಖಾನೆಗಳಿಂದ ಹಣ ಬಂದಿಲ್ಲ ಅಂತ ಪ್ರತಿಭಟನೆ ಮಾಡ್ತಾರೆ. ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಿದ್ರೆ ರೈತರು ಮುಳುಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ರಾಜ್ಯದಲ್ಲಿ ಈಗ ಇರುವುದುಎರಡು ಮೂರು ಖಾಸಗಿ ಕಾರ್ಖಾನೆಗಳು.ಇವರೇ ಒಂದಾಗಿ ನಿಯಮಗಳನ್ನು ಮಾಡ್ತಾರೆ. ಉತ್ತರ ಕರ್ನಾಟಕದ ರೈತರ ಸ್ಥಿತಿಯೇ ಮಂಡ್ಯದಲ್ಲಿಯೂ ಆಗುತ್ತದೆ.ಕಾರ್ಖಾನೆಯನ್ನು ಮುಳುಗಿಸಲುಬಿಜೆಪಿ ನಾಯಕರು ಈಗಾಗಲೇ ಹುನ್ನಾರ ನಡೆಸಿದ್ದಾರೆ.ಉತ್ತರ ಕರ್ನಾಟಕದ ಮುಗ್ದ ರೈತರಿಗೆ ಮೋಸ ಮಾಡಿದ ರೀತಿಯಲ್ಲೇ ಮಂಡ್ಯ ರೈತರಿಗೂ ಮೋಸ ಮಾಡಲು ಹೊರಟಿದ್ದಾರೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.