ADVERTISEMENT

ಪಠ್ಯಪುಸ್ತಕದಲ್ಲಿ ಮಲೆಯಾಳಿ ನಟನ ಚಿತ್ರ: ಡಿ.ಕೆ ಸುರೇಶ್‌ಗೆ ಸುರೇಶ್ ಕುಮಾರ್ ಟಾಂಗ್

ಮಾಹಿತಿ ಸರಿಯಾಗಿ ತಿಳಿಯದೇ ಮಾಡಿದ ಅವಸರದ ಆರೋಪ ವಿವೇಚನಾಶೂನ್ಯ 

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 4:41 IST
Last Updated 1 ಫೆಬ್ರುವರಿ 2022, 4:41 IST
   

ಬೆಂಗಳೂರು: ರಾಜ್ಯದ ತರಗತಿಯೊಂದರಪುಸ್ತಕದಲ್ಲಿ "ಅಂಚೆಯಣ್ಣ" ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿರುವ ಸಂಸದ ಡಿ.ಕೆ.ಸುರೇಶ್ ಅವರ ಅವಸರದಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಇಂದಿನ ಮಾಧ್ಯಮಗಳಲ್ಲಿ ವರದಿಯಾಗಿರುವ ಸಂಸದ ಸುರೇಶ್ ಅವರ ಆರೋಪ, ಹಾಗೂ ಅವರು ತಮ್ಮಿಂದ ನಿರೀಕ್ಷಿಸಿರುವ ಸ್ಪಷ್ಟೀಕರಣಕ್ಕೆ ಫೇಸ್‌ಬುಕ್‌ನಲ್ಲಿಉತ್ತರಿಸಿರುವ ಸುರೇಶ್ ಕುಮಾರ್,ಡಿಕೆ ಸುರೇಶ್ ರವರೇ, ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ ಎಂದಿದ್ದಾರೆ.

ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು.ಇದು ಖಂಡಿತ ನಮ್ಮ ರಾಜ್ಯದಶಿಕ್ಷಣ ಇಲಾಖೆ ಪ್ರಕಟಿಸಿರುವಆಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ ಎಂದಿದ್ದಾರೆ.

ADVERTISEMENT

ರಾಜ್ಯ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರುಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರವನ್ನು ತೋರಿಸಿ ಅದನ್ನೂ ಸಹಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ‌ ಅರ್ಥವಿಲ್ಲ. ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು.ಅಥವಾ ನೀವೇ ದಾರಿ ತಪ್ಪಿರಬೇಕು! ಎಂದು ಟೀಕಿಸಿದ್ದಾರೆ.

ಸುರೇಶ್ ಕುಮಾರ್ ಫೇಸ್‌ಬುಕ್ ಪೋಸ್ಟ್ ಲಿಂಕ್ ಇಲ್ಲಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.