ADVERTISEMENT

ಉರ್ದು ಸಾಹಿತಿಗಳಿಗೆ ಕುವೆಂಪು ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:33 IST
Last Updated 12 ಡಿಸೆಂಬರ್ 2018, 19:33 IST
   

ಬೆಂಗಳೂರು: ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ 2018ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಉರ್ದು ಸಾಹಿತಿಗಳಾದ ಹೈದರಾಬಾದ್‌ನ ಜೀಲಾನಿ ಬಾನೊ, ನೊಯಿಡಾದ ರತನ್‌ ಸಿಂಗ್‌ ಅವರನ್ನು ಜಂಟಿಯಾಗಿ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 5 ಲಕ್ಷ ಒಳಗೊಂಡಿದೆ. ಕುಪ್ಪಳಿಯಲ್ಲಿ ಡಿ.29ರಂದು ನಡೆಯುವ ‘ಕುವೆಂಪು ಜನ್ಮೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ, ಹಿಂದಿ ಲೇಖಕ ಡಾ. ಗಂಗಾ ಪ್ರಸಾದ್‌ ಬಿಮಲ್‌, ಜೆಎನ್‌ಯು ಪ್ರಾಧ್ಯಾಪಕರಾದ ಡಾ.ಗೋವಿಂದ್‌ ಪ್ರಸಾದ್‌, ಡಾ.ಅನ್ವರ್‌ ಪಾಷಾ ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಅವರು ಆಯ್ಕೆ ಸಮಿತಿಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.