ADVERTISEMENT

ಕಾನೂನು ಶಾಲೆ: ಸ್ಥಳೀಯ ಪ್ರಾತಿನಿಧ್ಯಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:16 IST
Last Updated 29 ಸೆಪ್ಟೆಂಬರ್ 2020, 21:16 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು:ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಪ್ರಾತಿನಿಧ್ಯ ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ರಾಷ್ಟ್ರೀಯ ಕಾನೂನು ವಿದ್ಯಾಲಯ ಕಾಯ್ದೆ–2020ರ ಪ್ರಕಾರ ರಾಜ್ಯದಲ್ಲಿ 10 ವರ್ಷ ವ್ಯಾಸಂಗ ಮಾಡಿರುವ ಶೇ 25ರಷ್ಟು ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತಿತ್ತು.ಈ ಕಾಯ್ದೆ ಪ್ರಶ್ನಿಸಿ ವಿದ್ಯಾರ್ಥಿಯೊಬ್ಬರು ರಿಟ್ ಅರ್ಜಿ ಸಲ್ಲಿಸಿದ್ದರು.

‘ಕಾನೂನು ಶಾಲೆಯು ಸ್ವಾಯತ್ತ ಸಂಸ್ಥೆಯಾಗಿದ್ದು, ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲ.ಮೀಸಲಾತಿ ವಿಷಯವನ್ನು ಕಾರ್ಯನಿರ್ವಾಹಕ ಮಂಡಳಿ ಮಾತ್ರ ಪರಿಗಣಿಸಬಹುದೆ ಹೊರತು ರಾಜ್ಯ ಸರ್ಕಾರವಲ್ಲ’ ಎಂದುನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಮತ್ತು ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ವಿಭಾಗೀಯ ಅಭಿಪ್ರಾಯಪಟ್ಟಿತು.

ADVERTISEMENT

‘ಆಡಳಿತ ನಿರ್ವಹಣೆ, ನಿಯಂತ್ರಣ ಎಲ್ಲವನ್ನೂ ಕಾರ್ಯನಿರ್ವಾಹಕ ಮಂಡಳಿಯೇ ಹೊಂದಿದೆ. ಸಂಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದಷ್ಟೇ ರಾಜ್ಯ ಸರ್ಕಾರದ ಕೆಲಸ. ಬೇರೆ ಬೇರೆ ರಾಜ್ಯಗಳಿಂದಲೂ ಸಂಸ್ಥೆ ಅನುದಾನ ಪಡೆದುಕೊಂಡಿದೆ’ ಎಂದು ಪೀಠ ಹೇಳಿತು.

‘ಭೂಮಿ ಮತ್ತು ಕಾರ್ಪಸ್ ನಿಧಿನೀಡುವಲ್ಲಿ ರಾಜ್ಯ ಸರ್ಕಾರದ ಪಾತ್ರ ಇದ್ದರೂ ರಾಷ್ಟ್ರ ಮಟ್ಟದ್ದಾಗಿರುವ ಕಾನೂನು ಶಾಲೆಯ ಆಡಳಿತದಲ್ಲಿ ಪಾತ್ರ ಬಹಳ ಕಡಿಮೆ. ನಿರ್ವಹಣೆ ಮೇಲೆ ರಾಜ್ಯದ ಶಾಸಕಾಂಗಕ್ಕೆ ಯಾವುದೇ ಅಧಿಕಾರಇಲ್ಲ’ ಎಂದು ಅಭಿಪ್ರಾಯಪಟ್ಟಿತು.

‘ಸ್ಥಳೀಯ ಮೀಸಲಾತಿ ನಿರಾಕರಿಸಿದ ಕಾರಣಕ್ಕೆ ಕರ್ನಾಟಕದ ವಿದ್ಯಾರ್ಥಿಗಳಿಗೆಪ್ರಾತಿನಿಧ್ಯವಿಲ್ಲ ಎಂದು ಭಾವಿಸಬಾರದು. ಈಗಾಗಲೇ ಸುಮಾರು ಮೂರನೇ ಒಂದು ಭಾಗದಷ್ಟು ಸೀಟುಗಳನ್ನು(ಸುಮಾರು 40) ನೀಡಲಾಗಿದೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.