ADVERTISEMENT

ವಿಧಾನಸಭೆಯಲ್ಲಿ ₹13,823 ಕೋಟಿ ಪೂರಕ ಅಂದಾಜು ಮಂಡನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆಯಡಿ ವಿವಿಧ ಎಸ್ಕಾಂಗಳಿಗೆ ₹4,000 ಕೋಟಿ ಸಬ್ಸಿಡಿ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಬಿಲ್ಲುಗಳ ಪಾವತಿಗೆ ₹1000 ಕೋಟಿ, ಕೆಪಿಎಸ್‌ಸಿ ಪರೀಕ್ಷಾ ವೆಚ್ಚಕ್ಕೆ ಹೆಚ್ಚುವರಿಯಾಗಿ ₹43 ಕೋಟಿ ಸೇರಿ ವಿವಿಧ ಬೇಡಿಕೆಗಳಿಗೆ ₹13,823.47 ಕೋಟಿ ಮೊತ್ತದ ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪೂರಕ ಅಂದಾಜು ಮಂಡಿಸಿದರು.

ADVERTISEMENT

ಮುಖ್ಯಾಂಶಗಳು:

  • ವಾಣಿಜ್ಯ ತೆರಿಗೆ, ಅಬಕಾರಿ ಮತ್ತು ಖಜಾನೆ ಇಲಾಖೆಗಳ ವಾಹನ ಖರೀದಿಗೆ ₹34 ಕೋಟಿ

  • ಕೆಪಿಎಸ್‌ಸಿ ರಹಸ್ಯ ಸೇವಾ ವೆಚ್ಚಕ್ಕೆ ಹೆಚ್ಚುವರಿ ₹20 ಕೋಟಿ, ಸಾಮಾನ್ಯ ವೆಚ್ಚಕ್ಕಾಗಿ ₹2 ಕೋಟಿ, ಅಧ್ಯಕ್ಷರು ಮತ್ತು ಸದಸ್ಯರ ವೇತನ ಪಾವತಿಗೆ ಹೆಚ್ಚುವರಿ ₹27 ಲಕ್ಷ. ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕಾಗಿ ಹೆಚ್ಚುವರಿ ₹50 ಲಕ್ಷ.

  • ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಹೆಲಿಕಾಪ್ಟರ್‌ ಪ್ರವಾಸಗಳ ಹೆಚ್ಚುವರಿ ವೆಚ್ಚ ₹2 ಕೋಟಿ

  • ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಲ್ಲಿ ಮಾಧ್ಯಮ ಕೋಶ ಸ್ಥಾಪನೆಗಾಗಿ ಹೆಚ್ಚುವರಿ ₹15 ಲಕ್ಷ

  • 2023–24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಯಿಟಿ ಪಾವತಿಗಾಗಿ ₹39.81 ಕೋಟಿ

  • 2024–25 ಸಾಲಿನಲ್ಲಿ ಜಾಹೀರಾತು ವೆಚ್ಚ, ಗೃಹಲಕ್ಷ್ಮಿ ಯೋಜನೆಯ ಪ್ರಚಾರಕ್ಕೆ ಸೇರಿ ಹೆಚ್ಚುವರಿ ₹105.55 ಕೋಟಿ

  • ಕರ್ನಾಟಕ ಇಂಟರ್‌ನ್ಯಾಷನಲ್‌ ಟ್ರಾವೆಲ್ ಎಕ್ಸ್‌ಪೊ ಸಮಾವೇಶಕ್ಕೆ ₹ 6 ಕೋಟಿ ಮತ್ತು ಹಂಪಿ ಉತ್ಸವಕ್ಕೆ ₹7 ಕೋಟಿ ಸೇರಿ ಹೆಚ್ಚುವರಿ ₹13 ಕೋಟಿ

  • ಬಸವಕಲ್ಯಾಣದ ಅನುಭವ ಮಂಟಪ ಕಾಮಾಗಾರಿ ಬಿಲ್‌ ಪಾವತಿಗೆ ಹೆಚ್ಚುವರಿ ₹25 ಕೋಟಿ

  • ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜಿನ ಬಾಕಿ ಬಿಲ್ ಪಾವತಿಸಲು ಹೆಚ್ಚುವರಿ ₹20 ಕೋಟಿ

  • ವಿವಿಧ ನೀರಾವರಿ ನಿಗಮಗಳ ಕಾಮಗಾರಿ ಮತ್ತು ಬಂಡವಾಳ ವೆಚ್ಚಕ್ಕಾಗಿ ಹೆಚ್ಚುವರಿ ₹1,803 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.