ಬೆಂಗಳೂರು: ‘ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾರ್ಚ್ 3ರಂದು ಭಾಷಣ ಮಾಡಲಿದ್ದಾರೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಜಂಟಿ ಅಧಿವೇಶನದ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಮಾರ್ಚ್ 3ರಿಂದ ಅಧಿವೇಶನ ಆರಂಭವಾಗುವ ಮಾಹಿತಿ ಬಂದಿದೆ. ಆದ್ದರಿಂದಲೇ ವಿಧಾನಸೌಧದ ಆವರಣದಲ್ಲಿ ಅದಕ್ಕೂ ಮುನ್ನ ‘ಪುಸ್ತಕ ಮೇಳ– ಸಾಹಿತ್ಯ ಉತ್ಸವ’ ಆಯೋಜಿಸಲಾಗಿದೆ. ಎಲ್ಲ ಶಾಸಕರೂ ಭಾಗವಹಿಸಲು ಅನುವಾಗುವಂತೆ ಮಾರ್ಚ್ 3ರವರೆಗೆ ಮೇಳ ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.