ADVERTISEMENT

ಕಡಬ | ಮಿಡತೆ ಹಿಂಡು ಪ್ರತ್ಯಕ್ಷ, ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 30 ಮೇ 2020, 19:13 IST
Last Updated 30 ಮೇ 2020, 19:13 IST
ಕಡಬ ಸಮೀಪ ನೂಜಿಬಾಳ್ತಿಲ ಎಂಬಲ್ಲಿ ತೋಟದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು
ಕಡಬ ಸಮೀಪ ನೂಜಿಬಾಳ್ತಿಲ ಎಂಬಲ್ಲಿ ತೋಟದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು   

ಕಡಬ: ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದ ಹೇರದ ಆನಂದ ಹೇರ ಎಂಬವರ ತೋಟದ ಮರವೊಂದರಲ್ಲಿ ಶುಕ್ರವಾರ ಸಂಜೆ ಮಿಡತೆಗಳ ಹಿಂಡು ಕಾಣಿಸಿಕೊಂಡಿದೆ.

ಹೇರ ಕೊಣಾಜೆ ಪ್ರದೇಶದ ಕಾಡಿನ ಅಂಚಿನಲ್ಲಿದೆ. ಮಿಡತೆಗಳು ರಾತ್ರಿವರೆಗೂ ಇದ್ದು, ಶನಿವಾರ ಬೆಳಿಗ್ಗೆ ಕಾಣಿಸಿಕೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ತೋಟದಲ್ಲಿ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತ ಮಿಡತೆಗಳು ಕಾಣಿಸಿದ್ದು, ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಈ ಗಾತ್ರದ ಮಿಡತೆಯೂ ನಮಗೆ ಹೊಸದಾಗಿದೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಮಿಡತೆ ಹಾವಳಿ ಬಗ್ಗೆ ಕೇಳಿದ ಕಾರಣ, ಆತಂಕ ಉಂಟಾಗಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸ್ಥಳೀಯರಾದ ಆನಂದ ಹೇರಾ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.