ADVERTISEMENT

ಮಾತೆ ಮಾಣಿಕೇಶ್ವರಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:35 IST
Last Updated 9 ಮಾರ್ಚ್ 2020, 22:35 IST
ಕಲಬುರ್ಗಿ ಜಿಲ್ಲೆ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಗುಹೆಯತ್ತ ಕೊಂಡೊಯ್ಯುವ ಮುನ್ನ ಗಣ್ಯರು ಅಂತಿಮ ನಮನ ಸಲ್ಲಿಸಿದರು
ಕಲಬುರ್ಗಿ ಜಿಲ್ಲೆ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಗುಹೆಯತ್ತ ಕೊಂಡೊಯ್ಯುವ ಮುನ್ನ ಗಣ್ಯರು ಅಂತಿಮ ನಮನ ಸಲ್ಲಿಸಿದರು   

ಕಲಬುರ್ಗಿ: ಶನಿವಾರ ರಾತ್ರಿ ನಿಧನರಾಗಿದ್ದ ಸೇಡಂ ತಾಲ್ಲೂಕಿನ ಯಾನಾಗುಂದಿಯ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಪೀಠದ ಮಾತೆ ಮಾಣಿಕೇಶ್ವರಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಣಿಕ್ಯಗಿರಿಯ ಆಶ್ರಮದ ಆವರಣದಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು.

ಸರ್ಕಾರದ ಪರವಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಭಾಗವಹಿಸಿ ಮಾಣಿಕೇಶ್ವರಿ ಅಮ್ಮನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಪಾರ ಸಂಖ್ಯೆಯ ಭಕ್ತರು ಉರಿ ಬಿಸಿಲು, ಝಳವನ್ನೂ ಲೆಕ್ಕಿಸದೇ ಮಾಣಿಕ್ಯಗಿರಿಯತ್ತ ಬರುತ್ತಲೇ ಇದ್ದುದನ್ನು ಗಮನಿಸಿದ ಆಶ್ರಮದ ಆಡಳಿತ ಮಂಡಳಿಯವರು ಮತ್ತೆ ಒಂದು ಗಂಟೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದರು.

ಆಶ್ರಮದಲ್ಲಿ ಈ ಮೊದಲೇ ನಿರ್ಮಿಸಿದ್ದ ಗುಹೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರ
ಪ್ರದೇಶದಿಂದ ಬಂದಿದ್ದ ಸ್ವಾಮೀಜಿಗಳು ವಿಧಿವಿಧಾನ ನೆರವೇರಿಸಿದರು. ಬಂದ ಭಕ್ತರಿಗೆ ಆಶ್ರಮದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.