ADVERTISEMENT

ವಿದ್ಯಾರ್ಥಿನಿ ಮಧು ಸಾವು ಪ್ರಕರಣ: ಪೊಲೀಸರ ವೈಫಲ್ಯದ ಬಗ್ಗೆಯೂ ತನಿಖೆ: ಎಡಿಜಿಪಿ

ಅನುಮಾನಾಸ್ಪದ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:28 IST
Last Updated 27 ಏಪ್ರಿಲ್ 2019, 20:28 IST
   

ರಾಯಚೂರು: ‘ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾರಂಭಿಕ ಹಂತದತನಿಖೆಯಲ್ಲಿ ಪೊಲೀಸರಿಂದಆಗಿರುವ ಲೋಪದ ಬಗ್ಗೆಯೂ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಎಡಿಜಿಪಿಎಂ.ಎ.ಸಲೀಂ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣದ ತನಿಖೆಯಲ್ಲಿಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಒಬ್ಬರನ್ನು ಈಗಾಗಲೇಅಮಾನತು ಮಾಡಲಾಗಿದೆ‌’ ಎಂದರು.

ಇದಕ್ಕೂ ಮುನ್ನ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಅವರು, ಪೋಷಕರೊಂದಿಗೆ ಚರ್ಚಿಸಿದರು.

ADVERTISEMENT

‘ಬಂಧಿತ ಆರೋಪಿ ನಮ್ಮಮಗಳೊಂದಿಗೆ ಇರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ಈ ಕುರಿತು ಕ್ರಮ ಜರುಗಿಸಬೇಕು’ ಎಂದು ಪೋಷಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಲೀಂ, ‘ಭಾವಚಿತ್ರ ಹರಿಬಿಟ್ಟವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾ
ಗುವುದು’ ಎಂದು ಭರವಸೆ ನೀಡಿದರು.

ಅವಧಿ ವಿಸ್ತರಣೆ:ಆರೋಪಿ ಸುದರ್ಶನ ಯಾದವ್ ಸಿಐಡಿ ಕಸ್ಟಡಿಯಅವಧಿಯನ್ನು ಇಲ್ಲಿನ ನ್ಯಾಯಾಲಯ ಮೇ 2ರವರೆಗೆ ವಿಸ್ತರಣೆ ಮಾಡಿದೆ. ಅವಧಿ ಶನಿವಾರ ಅಂತ್ಯಗೊಂಡಿದ್ದರಿಂದ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.