ADVERTISEMENT

ದೆಹಲಿ: ‘ಮದ್ರಾಸ್‌ ಹೋಟೆಲ್‌’ ಮನೆಮಾತಾಗಲು ಕಾರಣರಾಗಿದ್ದ ಪ್ರಿಯವದನ ರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 15:18 IST
Last Updated 12 ನವೆಂಬರ್ 2025, 15:18 IST
ಪ್ರಿಯವದನ ರಾವ್‌ 
ಪ್ರಿಯವದನ ರಾವ್‌    

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ‘ಮದ್ರಾಸ್‌ ಹೋಟೆಲ್‌‘ ಮನೆಮಾತಾಗಲು ಕಾರಣರಾಗಿದ್ದ ಪ್ರಿಯವದನ ರಾವ್ (90) ಇತ್ತೀಚೆಗೆ ನಿಧನರಾದರು. 

ಅವರು ದೆಹಲಿಯ ಮೊತ್ತಮೊದಲ ಉಡುಪಿ ಹಾಗೂ ದಕ್ಷಿಣ ಭಾರತದ ಹೋಟೆಲ್‌ ‘ಮದ್ರಾಸ್‌ ಹೋಟೆಲ್‌‘ನ ಸ್ಥಾಪಕ ಉಡುಪಿ ಸುಬ್ರಾಯ ಅವರ ಮಗ. ಕನ್ನಾಟ್‌ ಪ್ಲೇಸ್‌ನಲ್ಲಿ ಸುಬ್ರಾಯರು 1935ರಲ್ಲಿ ಈ ಹೋಟೆಲ್ ಆರಂಭಿಸಿದರು. 1955ರವರೆಗೆ ಮುನ್ನಡೆಸಿಕೊಂಡು ಹೋದರು. ಅವರ ಹಠಾತ್‌ ನಿಧನದ ಬಳಿಕ ಪ್ರಿಯವದನ ರಾವ್ ಹೋಟೆಲ್‌ನ ಹೊಣೆ ಹೊತ್ತುಕೊಂಡರು. ಉಡುಪಿಯ ತಿಂಡಿ ಹಾಗೂ ಊಟವನ್ನು ಉತ್ತರ ಭಾರತದಲ್ಲಿ ಪ್ರಖ್ಯಾತಗೊಳಿಸಿದರು.

ಈ ಹೋಟೆಲ್‌ಗೆ ಸಾವಿರಾರು ಜನರು ಬರುತ್ತಿದ್ದರು. ಇಲ್ಲಿನ ಬಸ್‌ ನಿಲ್ದಾಣವು 1970ರ ದಶಕದಲ್ಲಿ ‘ಮದ್ರಾಸ್‌ ಹೋಟೆಲ್‌ ನಿಲ್ದಾಣ‘ ಎಂದೇ ಪ್ರಸಿದ್ಧವಾಗಿತ್ತು. ಕಟ್ಟಡದ ಮಾಲೀಕರ ಜತೆಗಿನ ವಿವಾದದ ಕಾರಣದಲ್ಲಿ ಈ ಹೋಟೆಲ್‌ 2005ರಲ್ಲಿ ಮುಚ್ಚಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.