ADVERTISEMENT

ಮೊಬೈಲ್‌ ಕಳ್ಳತನ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 1:50 IST
Last Updated 25 ನವೆಂಬರ್ 2021, 1:50 IST
ಆರೋಪಿಗಳಿಂದ ಜಪ್ತಿ ಮಾಡಲಾಗಿರುವ ದ್ವಿಚಕ್ರ ವಾಹನ, ಮೊಬೈಲ್ ಹಾಗೂ ನಗದು 
ಆರೋಪಿಗಳಿಂದ ಜಪ್ತಿ ಮಾಡಲಾಗಿರುವ ದ್ವಿಚಕ್ರ ವಾಹನ, ಮೊಬೈಲ್ ಹಾಗೂ ನಗದು    

ಬೆಂಗಳೂರು: ಬೈಕ್‌ನಲ್ಲಿ ಬಂದು ಪಾದಚಾರಿಗಳ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಂತಿರುತ್ತಿದ್ದ ನಾಗರಿಕರಿಂದ ಮೊಬೈಲ್‌ ಕಸಿದುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಫ್ರೇಜರ್‌ ಟೌನ್‌ನಮಹಮ್ಮದ್‌ ಉಸ್ಮಾನ್‌ (21) ಹಾಗೂ ಜೆ.ಜೆ.ನಗರದ ಅಸ್ಲಾಂ ಪಾಷಾ ಯಾನೆ ಟಪ್ಪ ಅಸ್ಲಾಂ(50) ಬಂಧಿತರು. ಇವರಿಂದ ₹2.66 ಲಕ್ಷ ಮೌಲ್ಯದ ತಲಾ ಎರಡು ದ್ವಿಚಕ್ರ ವಾಹನ ಹಾಗೂ ಮೊಬೈಲ್‌ಗಳು ಮತ್ತು ₹31 ಸಾವಿರ ನಗದು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT