ಎಚ್.ಸಿ. ಮಹದೇವಪ್ಪ
ಬೆಂಗಳೂರು: ಮತದಾನ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಎಂಬುದು ಬಿಜೆಪಿಯ ಮುಂದುವರಿದ ಚುನಾವಣಾ ಕುತಂತ್ರದ ಭಾಗ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
ಜನಸಾಮಾನ್ಯರ ಬದುಕಿನ ವಿಷಯದಲ್ಲಿ ಅಷ್ಟೇನು ಆಸಕ್ತಿ ವಹಿಸದೆ ಕೇವಲ ಚುನಾವಣೆ, ದೇವರು, ಧರ್ಮ ಎಂದುಕೊಂಡು ಬದುಕಿರುವ ಬಿಜೆಪಿ ಈಗ ಬಿಹಾರದ ಚುನಾವಣೆ ಸಮಯದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಎಂಬ ಹೊಸ ತಂತ್ರವನ್ನು ಬಳಸಲು ಆರಂಭಿಸಿದೆ. ಈ ಬಾರಿಯ ಚುನಾವಣಾ ಸಮೀಕ್ಷೆಗಳು ಎನ್‌ಡಿಎ ಪಕ್ಷಗಳ ಪರವಾಗಿ ಇಲ್ಲ. ಹಾಗಾಗಿ, ಮತದಾನದ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಮತದಾರರ ಪರಿಷ್ಕರಣೆ ಎಂಬ ಹೊಸ ಕುತಂತ್ರ ಮಾಡುತ್ತಿದೆ ಎಂದು ದೂರಿದ್ದಾರೆ.
ಪರಿಷ್ಕರಣೆ ನೆಪದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಹೊರಗಿಡುವ ಸಂಚು ಮಾಡುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎನ್ನುವ ಬದಲು, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಇದ್ದಾರೆಯೇ ಎಂದು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇಲ್ಲಿ ಮೂಲ ಮತದಾರರೆಲ್ಲರಿಗೂ ಎಣಿಕೆ ಪತ್ರವನ್ನು ತುಂಬಲು ಸೂಚಿಸಲಾಗಿದೆ. ಇದೇ ಮೊದಲ ಬಾರಿ ಬಿಹಾರದಲ್ಲಿ ಇಂತಹ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.