ತುಂಗಭದ್ರಾ ಅಣೆಕಟ್ಟೆ
ನವದೆಹಲಿ: ಮಲಪ್ರಭಾ-ತುಂಗಭದ್ರಾ ಹಾಗೂ ಆಲಮಟ್ಟಿ-ಮಲಪ್ರಭಾ ನದಿಗಳ ಜೋಡಣೆ ಕಾರ್ಯಸಾಧು ಅಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
ರಾಜ್ಯಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಲಹರ್ ಸಿಂಗ್ ಸಿರೊಯಾ ಪ್ರಶ್ನೆಗೆ ಉತ್ತರಿಸಿರುವ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ‘ಭದ್ರಾ-ವೇದಾವತಿ, ಬರಪೊಳೆ-ಕಾವೇರಿ ನದಿಗಳ ಜೋಡಣೆ ಪ್ರಸ್ತಾವದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿದಿದೆ’ ಎಂದರು.
ಬೇಡ್ತಿ-ವರದಾ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದೆ. ಅಘನಾಶಿನಿ-ವೇದಾವತಿ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಟಲ್ ಭೂಜಲ ಯೋಜನೆಯಡಿ ಕರ್ನಾಟಕಕ್ಕೆ ಈವರೆಗೆ ₹903.21 ಕೋಟಿ ಬಿಡುಗಡೆ ಮಾಡಲಾಗಿದೆ. ಅಂತರ್ಜಲ ನಿರ್ವಹಣೆಗೆ ಕೇಂದ್ರ ಅಂತರ್ಜಲ ಮಂಡಳಿಯಿಂದ ರಾಜ್ಯಕ್ಕೆ ₹34.32 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.