ADVERTISEMENT

ಸಂಶೋಧನಾ ಹಡಗಿಗೆ ಬೆಂಕಿ: 16 ವಿಜ್ಞಾನಿಗಳು ಸೇರಿ 46 ಜನರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 19:24 IST
Last Updated 16 ಮಾರ್ಚ್ 2019, 19:24 IST
   

ಮಂಗಳೂರು: ವಿಜ್ಞಾನಿಗಳ ಕರೆದೊಯ್ಯುತ್ತಿದ್ದ ಸಾಗರ ಸಂಶೋಧನಾ ಹಡಗು, ಮಂಗಳೂರು ಸಮುದ್ರ ಕಿನಾರೆಯಿಂದ 40 ನಾಟಿಕಲ್‌ ಮೈಲಿ ದೂರದಲ್ಲಿ ಬೆಂಕಿ ಅನಾಹುತಕ್ಕೆ ಒಳಗಾಗಿದೆ. ಹಡಗಿನಲ್ಲಿದ್ದ 16 ವಿಜ್ಞಾನಿಗಳು, 30 ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.

ಕೊಚ್ಚಿಯಿಂದ ಸಂಶೋಧನೆಗಾಗಿ ಬಂದಿದ್ದ ‘ಸಾಗರ ಸಂಪದ’ ಹೆಸರಿನ ಸಾಗರ ಸಂಶೋಧನಾ ಹಡಗು ಶುಕ್ರವಾರ ರಾತ್ರಿ ಮರಳಿ ಕೊಚ್ಚಿಗೆ ತೆರಳುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.

‘ಶುಕ್ರವಾರ ರಾತ್ರಿ 10 ಗಂಟೆಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಮಂಗಳೂರು ಕೇಂದ್ರ ‘ಸುಜಯ್‌’ ಮತ್ತು ‘ವಿಕ್ರಮ್‌’ ಹಡಗಿನೊಂದಿಗೆ ತಕ್ಷಣ ಕಾರ್ಯಪ್ರವೃತ್ತವಾಗಿ ರಾತ್ರಿ 12.30ಕ್ಕೆ ಘಟನಾ ಸ್ಥಳಕ್ಕೆ ತಲುಪಿತು. ರಾತ್ರಿ 1.30ಕ್ಕೆ ಹಡಗಿನಲ್ಲಿದ್ದ ಸಂಶೋಧಕರು, ಸಿಬ್ಬಂದಿಯನ್ನು ರಕ್ಷಿಸಿ, ಬೆಂಕಿ ನಂದಿಸಿದೆ’ ಎಂದು ಕರಾವಳಿ ಕಾವಲು ಪಡೆಯ ಕಮಾಂಡೆಂಟ್‌ ಎಸ್‌.ಎಸ್‌. ದಸಿಲ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.