ADVERTISEMENT

ಸೆ. 30ಕ್ಕೆ ದೇಗುಲಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 22:37 IST
Last Updated 28 ಸೆಪ್ಟೆಂಬರ್ 2022, 22:37 IST
   

ಬೆಂಗಳೂರು: ಎಲ್ಲ ದೇವಸ್ಥಾನಗಳಲ್ಲಿ ಲಲಿತಾ ಪಂಚಮಿ (ಸೆ. 30) ದಿನ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ.

ಪ್ರತಿವರ್ಷ ಪಾಡ್ಯದಿಂದ ನವಮಿವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದಿರುವ ಆಚರಣೆ. ಅದರಂತೆ, ಇದೇ 30ರಂದು ಲಲಿತಾ ಪಂಚಮಿ ವಿಶೇಷವಾಗಿದ್ದು, ಅಂದು ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರನ್ನು ಬರಮಾಡಿಕೊಂಡು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ಕುಂಕುಮಾರ್ಚನೆ ನೆರವೇರಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಅನಿವಾರ್ಯಗಳಿಂದ ಅಂದು ಕುಂಕುಮಾರ್ಚನೆ ನಡೆಸಲು ಸಾಧ್ಯವಾಗದಿದ್ದರೆ ಅ. 3ರಂದು (ದುರ್ಗಾಷ್ಟಮಿ) ಈ ಕಾರ್ಯಕ್ರಮ ನಡೆಸಬೇಕು. ಜತೆಗೆ ವ್ಯಾಪಕ ಪ್ರಚಾರ ನೀಡಬೇಕು’ ಎಂದೂ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.