ADVERTISEMENT

ಹೈಕಮಾಂಡ್‌ಗೆ ಕಾರ್ಯಕ್ಷಮತೆಯ ವರದಿ ಸಲ್ಲಿಸಿದ MC ಸುಧಾಕರ್, ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 16:03 IST
Last Updated 4 ಡಿಸೆಂಬರ್ 2024, 16:03 IST
<div class="paragraphs"><p>ಸಚಿವ ಡಾ.ಎಂ.ಸಿ. ಸುಧಾಕರ್‌</p></div>

ಸಚಿವ ಡಾ.ಎಂ.ಸಿ. ಸುಧಾಕರ್‌

   

ಬೆಂಗಳೂರು: ‘ಸಚಿವರಾಗಿ ನಾವು ಮಾಡಿದ ಕಾರ್ಯಗಳ ಸಾಧನಾ ವರದಿಯನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಿದ್ದೇವೆ’ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗಾರರ ಜತೆ ಬುಧವಾರ ಇಬ್ಬರೂ ಪ್ರತ್ಯೇಕವಾಗಿ ಮಾತನಾಡಿ, ‘ಸಿದ್ದರಾಮಯ್ಯ ಸಂಪುಟದ ಸಚಿವರ ಮೌಲ್ಯಮಾಪನ ಮಾಡುವ ಹಕ್ಕು ಹೈಕಮಾಂಡ್‌ಗೆ ಇದೆ. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸಾಕಾರಗೊಳಿಸುವುದು ನಮ್ಮ ಕರ್ತವ್ಯವೂ ಹೌದು’ ಎಂದು ಹೈಕಮಾಂಡ್‌ ನಡೆಯನ್ನು ಸಮರ್ಥಿಸಿಕೊಂಡರು. 

ADVERTISEMENT

ಎಂ.ಸಿ.ಸುಧಾಕರ್, ‘ಎಲ್ಲ ಸಚಿವರಿಂದಲೂ ಹೈಕಮಾಂಡ್‌ ವರದಿ ಕೇಳಿದೆ. ನನ್ನ ಖಾತೆಗೆ ಸಂಬಂಧಿಸಿದ ವರದಿಯನ್ನು ಈಗಾಗಲೇ ಕಳುಹಿಸಿದ್ದೇನೆ. ಆಯಾ ಸಚಿವರ ಕಾರ್ಯವೈಖರಿ ಆಧರಿಸಿ, ಹೈಕಮಾಂಡ್‌ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

ಮಧು ಬಂಗಾರಪ್ಪ, ‘ಶಾಲಾ ಶಿಕ್ಷಣ ಇಲಾಖೆಯ ಸಚಿವನಾದ ನಂತರ ಮಾಡಿದ ಉತ್ತಮ ಕೆಲಸಗಳ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದೇನೆ. ಇನ್ನೊಂದು ವರದಿಯನ್ನು ಶೀಘ್ರ ಕಳುಹಿಸುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.