ADVERTISEMENT

ಸರತಿಯಲ್ಲಿ ಬರುವಂತೆ ಹೇಳಿದ್ದಕ್ಕೆ ಯುವತಿ ಮೇಲೆ ಹಲ್ಲೆ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 16:39 IST
Last Updated 8 ಸೆಪ್ಟೆಂಬರ್ 2021, 16:39 IST

ಬೆಂಗಳೂರು: ತರಕಾರಿ ಖರೀದಿಸಲು ಸರತಿಯಲ್ಲಿ ಬರುವಂತೆ ಹೇಳಿದ್ದಕ್ಕಾಗಿ ಲಾವಣ್ಯ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಕಿಶೋರ್‌ ಎಂಬಾತನನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

‘ಮೈಕೋ ಲೇಔಟ್‌ನ ಏಳನೇ ಮುಖ್ಯರಸ್ತೆಯಲ್ಲಿರುವ ಸೂಪರ್‌ ಮಾರ್ಕೆಟ್‌ನಲ್ಲಿ ಯುವತಿ ತರಕಾರಿ ಖರೀದಿಸಲು ನಿಂತಿದ್ದರು. ಮುಂದಿದ್ದ ಯುವತಿಯನ್ನು ತಳ್ಳಿದ್ದ ಕಿಶೋರ್‌ ತರಕಾರಿ ಖರೀದಿಸಲು ಮುಂದಾಗಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಆತನ ವರ್ತನೆಯನ್ನು ಯುವತಿ ಚಿತ್ರಿಸಲು ಮುಂದಾದಾಗ ಮೊಬೈಲ್‌ ಕಿತ್ತೆಸೆದಿದ್ದ. ಬಳಿಕ ಹಲ್ಲೆ ನಡೆಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT